ರಾಜಕೀಯ
ಪಾದರಾಯನಪುರ ಜಮೀರ್ ಅಪ್ಪನ ಆಸ್ತಿ ಅಲ್ಲ : ಸಚಿವ ಸಿ.ಟಿ.ರವಿ
ಸುದ್ದಿದಿನ,ಚಿಕ್ಕಮಗಳೂರು : ಪಾದರಾಯನ ಪುರಕ್ಕೆ ಪರ್ಮಿಷನ್ ತೆಗೆದುಕೊಂಡು ಹೋಗಬೇಕಂದ್ರೆ ನೀನೇನು ಮಹಮದ್ ಆಲಿ ಜಿನ್ನಾನಾ…? ಜಿನ್ನಾ ಪಾಕಿಸ್ತಾನ ಹುಟ್ಟಿದ್ದು, ಪಾದರಾಯನಪುರ ಜಮೀರ್ ಅಪ್ಪನ ಆಸ್ತಿ ಅಲ್ಲ ಎಂದು ಜಮೀರ್ ಅಹಮದ್ ವಿರುದ್ಧ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.
ಚಿಕ್ಕಮಗಳೂರಿನ ಬಿಜೆಪಿ ಕಚೇರಿಯಲ್ಲಿ ವಾಗ್ದಾಳಿ ನಡೆಸಿದ ಅವರು, ಜಮೀರ್ ನೀನ್ಯಾವ ಸೀಮೆ ತೋತಪ್ಪ ನಾಯಕ, ನಾನು ಬಂದಾಗಲೇ ಜಮೀರ್ ವಿಧಾನಸಭೆಗೆ ಬಂದದ್ದು,ಜಮೀರ್ ಗೆ ಒಂದು ಕಾನೂನು, ನನಗೊಂದು ಕಾನೂನು ಇಲ್ಲ. ಈ ದೇಶದ ಕಾನೂನು ಎಲ್ಲರಿಗೂ ಒಂದೇ.224 ಜನ ಶಾಸಕರಲ್ಲಿ ನೀನೂ ಒಬ್ಬ. ಅಪ್ಪನ ಆಸ್ತಿ ಆದ್ರೂ ದೇಶದೊಳಗಿದ್ದಾಗ ಕಾನೂನಿಗೆ ಬದ್ಧರಾಗಿರಬೇಕು ಎಂದು ಕೆಂಡಾಮಂಡಲವಾದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243