ದಿನದ ಸುದ್ದಿ
ರೈಲ್ವೆಯಲ್ಲಿ ವಿವಿಧ ಹುದ್ದೆಗಳು ಖಾಲಿ; ಅರ್ಹರಿಂದ ಅರ್ಜಿ ಆಹ್ವಾನ
ಸುದ್ದಿದಿನ ಡೆಸ್ಕ್
ಸೌತ್ ಈಸ್ಟ್ ಸೆಂಟ್ರಲ್ ರೈಲ್ವೆಯಲ್ಲಿ ಕಾಲಿ ಇರುವ 432 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆರ್ಆರ್ಬಿ ಅಪ್ರೆಂಟಿಸ್ ಹುದ್ದೆಗಳಿಗೆ ಅರದಜಿ ಆಹ್ವಾನಿಸಿದ್ದು, ಈ ಕುರಿತಂತೆ ರೈಲ್ವೆ ಇಲಾಖೆ ವೆಬ್ಸೈಟ್ ನಲ್ಲಿ ನೇಮಕಾತಿ ಆದೇಶ ಹೊರಡಿಸಿದೆ. ಅಭ್ಯರ್ಥಿಗಳು ಪೋಸ್ಟಲ್ ಮೂಲಕ ನಿಗದಿ ದಿನಾನಮಕದೊಳಗೆ ಸಲ್ಲಿಸಬೇಕು. ಜುಲೈ 31 ಕೊನೇ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.
ಹುದ್ದೆ: ಅಪ್ರೆಂಟಿಸ್.
ಹುದ್ದೆಗಳ ಸಂಖ್ಯೆ: 432 ಹುದ್ದೆಗಳು.
ಕೊನೇ ದಿನಾಂಕ: 31 ಜುಲೈ 2018.
ಅರ್ಜಿ, ಹೆಚ್ಚಿನ ಮಾಹಿತಿ: indianrailways.gov.in
ವಯೋಮಿತಿ: 15 – 24 ವರ್ಷಗಳ ವಯಸ್ಸಾಗಿರ ಬೇಕು.
ವಿದ್ಯಾರ್ಹತೆ: ಅಭ್ಯರ್ಥಿಗಳು 10ನೇ ತರಗತಿ ಉತ್ತೀರ್ಣ ಕಡ್ಡಾಯ. 10+2 ಅಥವಾ ಸರಿಸಮಾನ ವಿದ್ಯಾರ್ಹತೆ ಪಡೆದಿರಬೇಕು. ಐಟಿಐನ ವಿವಿಧ ಟ್ರೇಡ್ ಗಳಲ್ಲಿ ತರಬೇತಿ ಹೊಂದಿರಬೇಕು.
ಅರ್ಜಿ ಹೇಗೆ ಸಲ್ಲಿಸಬೇಕು: ಅಭ್ಯರ್ಥಿಗಳು ಇಲಾಖೆಯ ವೆಬ್‌ಸೈಟ್ ನಲ್ಲಿ ಲಭ್ಯವಿರುವ ನಿಗದಿ ಮಾಡಿದ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದು.