ಲೈಫ್ ಸ್ಟೈಲ್
ಕೆಮೋ ಕ್ರೇಜ್, ಹೇಗಿದೆ ನೋಡಿ..!
ಕೆಮೋ! ಏನಿದು ಕೆಮೋ ಎಂದು ಹುಬ್ಬೇರಿಸಬೇಡಿ. ಫ್ಯಾಷನ್ ಪ್ರಪಂಚದಲ್ಲಿ ದಿನ ದಿನಕ್ಕೆ ಒಂದು ಹೊಸ ಫ್ಯಾಷನ್ ಸೃಷ್ಟಿಯಾಗುತ್ತೆ. ಈ ಕೆಮೋ ಟ್ರೆಂಡ್ ಹಳೆಯದಾದರೂ 2017ರಲ್ಲಿ ಇದು ಭಾರಿ ಬೇಡಿಕೆ ಯಲ್ಲಿತ್ತು. 2018 ರಲ್ಲೂ ಈ ಟ್ರೆಂಡ್ ಮುಂದುವರಿದಿದೆ.
ಏನಿದು ಕೆಮೋ ಫ್ಯಾಷನ್!
ಮಿಲಿಟರಿ ಪ್ರಿಂಟ್ ಇರುವ ಉಡುಪುಗಳ ಟ್ರೆಂಡ್ “ಕೆಮೋ”ಎಂದು ಕರೆಯಲ್ಪಡುತ್ತಿದೆ. ಸೈನಿಕರು ತೊಡುವ ಹಸಿರು, ಕಪ್ಪು, ಕಂದು, ಬಣ್ಣದ ಮಿಶ್ರಣ ವಿರುಧ್ಧ ಈ ಉಡುಪಿಗೆ ಈಗ ಎಲ್ಲಿಲ್ಲದ ಬೇಡಿಕೆ. ಡೆನಿಮ್ ಅಷ್ಟೇ ಬೇಡಿಕೆ ಇದಕ್ಕೂ ಇದೆ. ಮಿಲಿಟರಿ ಹಸಿರು .. ಮಿಲಿಟರಿ ಪ್ರಿಂಟ್ ಫ್ಯಾಷನ್ ನ ಪ್ಯಾಂಟ್, ಶಾರ್ಟ್, ಜಾಕಟ್, ಕೋಟ್, ಫ್ರಾಕ್, ಸ್ಕರ್ಟ್ ಗಳನ್ನು ಮಾರುಕಟ್ಟೆಯಲ್ಲಿ ನೋಡಬಹುದು. ಚಿಕ್ಕ ಮಕ್ಕಳಿಂದ ವೃದ್ಧರು ಈ ಕೆಮೋ ಟ್ರೆಂಡ್ ಗೆ ದಾಸರಾಗಿದ್ದಾರೆ.
ಕೆಮೋ ಫ್ಯಾಷನ್ ಆಕ್ಸಸರೀಸ್!
ಕೆಮೋ ಪ್ರಿಂಟ್ ಬ್ಯಾಗ್, ಕಾಪ್, ಬೂಟು, ಕತ್ತಿನ ಟೈ, ಕೆಮೋ ಪ್ರಿಂಟ್ ಬೆಲ್ಟಿನ ಕೈ ಗಡಿಯಾರ, ಸೊಂಟದ ಬೆಲ್ಟ್, ಸ್ಕಾರ್ಫ.. ಕೈ ಬಳೆ.. ಕಾಲಿನ ಸಾಕ್ಸ್..ಹೀಗೆ ಎಲ್ಲದರಲ್ಲೂ ಕೆಮೋ ಟ್ರೆಂಡ್ ನೋಡಬಹುದು.
ಇದಿಷ್ಟು ಉಡುಪಿನ ಲೋಕದ ಕಥೆಯಾದರೇ, ಬ್ಯೂಟಿ ಪ್ರಿಯರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ “ಕೆಮೋ ಮೇಕಪ್ ಟ್ರೆಂಡ್ ” ಸೃಷ್ಟಿಸಿದ್ದಾರೆ!
ಈ ಮೇಕಪ್ ಯಶಸ್ವಿಯಾಗಿ ಯುವ ಪೀಳಿಗೆಗೆ ಇಷ್ಟ ವಾಗಿದೆ. ಕೈ ಉಗುರಿನ ನೈಲ್ ಆರ್ಟ್ ಇಂದ ಹಿಡಿದು ಕಣ್ಣಿನ ರೆಪ್ಪೆ ಮೇಲೆ ಕೆಮೋ ಆರ್ಟ್ ಮಾಡಲಾಗುತ್ತದೆ.. ತುಟಿಗಳ ಮೇಲೂ ಈ ಕೆಮೋ ಮೋಡಿ ನಡೆದಿದೆ. ಇನ್ನು ಕೆಮೋ ಫೇಸ್ ಸೇಂಟ್ ಪಾಶ್ಚಾತ್ಯ ದೇಶಗಳಲ್ಲಿ ಬಹಳ ಪ್ರಸಿದ್ಧ.
ಕೆಮೋ ನೈಲ್ ಆರ್ಟ್!
ಕೈ ಉಗುರಿನ ಮೇಲೂ ಮಿಲಿಟರಿ ಪ್ರಿಂಟ್! ಈ ಕಲೆ “ಕೆಮೋ ನೈಲ್ ಆರ್ಟ್ ” ಎಂದು ಪ್ರಸಿದ್ಧ ಆಗಿದೆ. ಭಾರತದಲ್ಲೂ ಮಹಿಳೆಯರ ಈ ಮಿಲಿಟರಿ ಪ್ರಿಂಟ್ ನೈಲ್ ಆರ್ಟ್ ಗೆ ಮನಸೋತಿದ್ದಾರೆ. ಹಸಿರು, ಕಂದು, ಕಪ್ಪು, ಬಿಳಿ ಬಣ್ಣದ ಮಿಶ್ರಣ ವೇ ಈ ಮಿಲಿಟರಿ ಪ್ರಿಂಟ್ ನೈಲ್ ಆರ್ಟ್!
ಕೆಮೋ ಲಿಪ್ ಆರ್ಟ್!
2017 ರಲ್ಲಿ ಕೇವಲ ಉಡುಪಿಗೆ ಸೀಮಿತ ವಾಗಿದ್ದ ಮಿಲಿಟರಿ ಪ್ರಿಂಟ್ ಈಗ ಮೇಕಪ್ ಲೋಕಕ್ಕೆ ಕಾಲಿಟ್ಟಿದೆ. ಕಪ್ಪು, ಮಿಲಿಟರಿ ಹಸಿರು, ಬಿಳಿ, ಕಂದು ಬಣ್ಣ ಬಳಸಿ ತುಟಿಗಳ ಮೇಲೆ ಕಲಾತ್ಮಕ ವಾಗಿ ಕೆಮೋ ಆರ್ಟ್ ಮಾಡಲಾಗುತ್ತದೆ. ಈ ರೀತಿಯ ಲಿಪ್ ಟ್ರೆಂಡ್ ಈಗ ವಿದೇಶದಲ್ಲಿ ಭಾರೀ ಸದ್ದು ಮಾಡುತ್ತಿದೆ.ಯುವ ಪೀಳಿಗೆಯ ಕೆಮೋ ಕ್ರೇಜ್ ಗೆ ಕಿರೀಟ ವಿಟ್ಟಂತೆ ಈ ಕೆಮೋ ಲಿಪ್ ಆರ್ಟ್ ಸೃಷ್ಟಿಯಾಗಿದೆ.
ಕೆಮೋ ಐ-ಮೇಕಪ್!
ಬ್ಯೂಟಿ ತಜ್ಞರು ಕೆಮೋ ಕಲೆಯನ್ನು ಕಣ್ಣು ರೆಪ್ಪೆಯ ಮೇಲೂ ವಿಸ್ತರಿಸಿದ್ದಾರೆ.ಕಣ್ಣು ರೆಪ್ಪೆ ಮೇಲೂ ಈ ಮಿಲಿಟರಿ ಪ್ರಿಂಟ್ ಮೋಡಿ ನೆಡೆದಿದೆ. ಈ ರೀತಿಯ ಮೇಕಪ್ ಭಾರತದಲ್ಲೂ ಯಶಸ್ವಿ ಯಾಗಿದೆ.
ಕೆಮೋ ಫೇಸ್ ಪೇಂಟ್!
ಮಿಲಿಟರಿ ಬಣ್ಣ ಗಳಾದ ಕಂದು, ಕಪ್ಪು, ಬಿಳಿ, ಹಸಿರು ಮಿಶ್ರಣವನ್ನು ಮುಖದ ಮೇಲೆ ರಚಿಸಿಕೊಳ್ಳುವುದು ಈಗ ಹೊಸ ಟ್ರೆಂಡ್ ಆಗಿದೆ.ಪಾಶ್ಚಾತ್ಯ ದೇಶಗಳ ಹಲವಾರು ಫ್ಯಾಷನ್ ಷೋ ಗಳಲ್ಲಿ ಸುಂದರಿಯರು..ಈ ಮೇಕಪ್ ಮೋಡಿ ಗೆ ಮಾರುಹೋಗಿದ್ದಾರೆ.
ಮೇಕಪ್ ಟಿಪ್ಸ್!
1.ಭಾರತದಲ್ಲಿ ಈ ಮಿಲಿಟರಿ ಮೇಕಪ್ ದಿನ ನಿತ್ಯದ ಬಳಕೆಗೆ ಸೂಕ್ತ ವಲ್ಲ.ಕೇವಲ ಫೋಟೋ ಶೂಟ್, ಫ್ಯಾಷನ್ ಪ್ರಪಂಚಕ್ಕೆ ಸದ್ಯ ಸೀಮಿತ ಎನಿಸಿಕೊಂಡಿದೆ.
2. ಮಿಲಿಟರಿ ನೈಲ್ ಆರ್ಟ್ ಎಲ್ಲರೂ ಸುಲಭವಾಗಿ ಮಾಡಿಕೊಳ್ಳಬಹುದಾಗಿದ್ದು , ಭಾರತದಲ್ಲಿ ಕಾಲೇಜು ಕನ್ಯೆ ಯರ ಮೆಚ್ಚುಗೆ ಗೆ ಪಾತ್ರ ವಾಗಿದೆ.
3. ಮಿಲಿಟರಿ ಪ್ರಿಂಟ್ ಉಡುಪು ಧರಿಸುವುದು ಈಗಿನ ಹೊಸ ಸ್ಟೈಲ್ ಸ್ಟೇಟ್ಮೆಂಟ್ ಆಗಿದೆ. ಸೆಲಿಬ್ರಿಟಿಗಳು ಈ ಕೆಮೋ ಟ್ರೆಂಡ್ ಗೆ ಮಾರಿಹೋಗಿದ್ದಾರೆ.
ಹಾಗಾದರೆ 2017 ರಲ್ಲಿ ಶುರುವಾದ ಕೆಮೋ ಸ್ಟೈಲ್ ಸ್ಟೇಟ್ಮೆಂಟ್ 2018 ರಲ್ಲೂ ಜನಪ್ರಿಯತೆ ಉಳಿಸಿಕೊಂಡಿದೆ.