ದಿನದ ಸುದ್ದಿ

ಕುಷ್ಠರೋಗ ಬಾಧಿತ ವ್ಯಕ್ತಿಗಳಿಗೆ ಕ್ಯಾಂಪ್

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ಬಳ್ಳಾರಿ : ದೇಹಕ್ಕೆ ಯಾವುದೇ ತೊಂದರೆ ಆಗದಂತೆ ಎಚ್ಚರಿಕೆಯಿಂದ ಮುಂಜಾಗ್ರತೆ ವಹಿಸಿದರೆ ಯಾವುದೆ ಗಾಯಗಳಾಗುವ ಸಂಭವ ಇರುವುದಿಲ್ಲ, ಒಂದು ವೇಳೆ ಎಚ್ಚರ ತಪ್ಪಿದರೆ ಗಾಯಗಳಾಗುವ ಸಂಭವ ಹೆಚ್ಚಾಗಿರುತ್ತದೆ ಎಂದು ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಟಿ.ರಾಜಶೇಖರ ರೆಡ್ಡಿ ಹೇಳಿದರು.

ಬಳ್ಳಾರಿ ನಗರ ಮತ್ತು ಗ್ರಾಮೀಣ ಕುಷ್ಠರೋಗ ಕಾರ್ಯಕ್ರಮದ ಮೇಲ್ವಿಚಾರಕರಾದ ಮಲ್ಲಿಕಾರ್ಜುನ ಮತ್ತು ಎ.ಮಾನಪ್ಪ ಅವರು ಶುಕ್ರವಾರ ಏರ್ಪಡಿಸಿದ್ದ ತಾಲೂಕಿನ ಕುಷ್ಠರೋಗ ಬಾಧಿತ ವ್ಯಕ್ತಿಗಳಿಗೆ ಕ್ಯಾಂಪ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕುಷ್ಠರೋಗ ಭಾದಿತ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಿ ಅದರಿಂದಾಗುವ ಪರಿಣಾಮಗಳು ಮತ್ತು ರೋಗದಿಂದ ಮುಕ್ತರಾಗಿರುವ ರೋಗಿಗಳು ಕೇವಲ 6, 12 ತಿಂಗಳುಗಳ ಕಾಲ ಚಿಕಿತ್ಸೆ ತೆಗೆದುಕೊಂಡರೆ ಸಾಲದು ಕನಿಷ್ಟ 5 ವರ್ಷಗಳ ಕಾಲ ಚಿಕಿತ್ಸೆ ಪಡೆಯುತ್ತಾ ಜಾಗೃತರಾಗಿರಬೇಕು ಎಂದು ಹೇಳಿದರು.

ಕೆ.ಎಸ್.ಸುಧಾಕರ್ ಡಿಎಫ್‍ಐಟಿ ಇವರು ಕುಷ್ಠರೋಗದಿಂದ ಅಂಗವಿಕಲರಾದ, ಪ್ರಸ್ತುತ ಚಿಕಿತ್ಸೆಯಲ್ಲಿರುವ ಹಾಗೂ ಗಾಯಗಳಾದ ವ್ಯಕ್ತಿಗಳಿಗೆ ನರ್ವ್ ಮತ್ತು ಸ್ಪರ್ಷದ ಬಗ್ಗೆ ತಪಾಸಣೆ ಮಾಡಿದರು. ನಂತರ 33 ಕುಷ್ಠರೋಗ ಬಾಧಿತ ವ್ಯಕ್ತಿಗಳಿಗೆ ಉಚಿತವಾಗಿ ಎಮ್.ಸಿ.ಆರ್ ಪಾದರಕ್ಷೆಗಳನ್ನು ವಿತರಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿಗಳಾದ ಮೋಹನ್‍ಕುಮಾರಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಕ್ಯಾಂಪ್ ಮೇಲ್ವಿಚಾರಕಾರದ ಗೀರಿಶ್, ಹುಲುಗಪ್ಪ, ಪಂಚಾಕ್ಷರಿ, ತಂಗಮ್ಮ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version