ದಿನದ ಸುದ್ದಿ
ಆಕಾಶವಾಣಿ ಭದ್ರಾವತಿ | ಚನ್ನಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ ಕ್ಯಾಂಪಸ್ ಕಟ್ಟೆ’ ಕಾರ್ಯಕ್ರಮ
ಸುದ್ದಿದಿನ,ಚನ್ನಗಿರಿ: ಪಟ್ಟಣದ ಶ್ರೀ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಐ ಕ್ಯೂ ಎ ಸಿ, ಕನ್ನಡ ಹಾಗೂ ಪತ್ರಿಕೋದ್ಯಮ ವಿಭಾಗದ ಸಹಯೋಗದೊಂದಿಗೆ ಭದ್ರಾವತಿ ಆಕಾಶವಾಣಿ ಕೇಂದ್ರವು ‘ಕ್ಯಾಂಪಸ್ ಕಟ್ಟೆ’ ನೇರ ಪ್ರಸಾರ ಕಾರ್ಯಕ್ರಮವನ್ನು ಇದೇ 13 ರಂದು (ಗುರುವಾರ) ಬೆಳಗ್ಗೆ ನಡೆಸಿಕೊಡಲಿದೆ ಎಂದು ಪ್ರಾಂಶುಪಾಲರಾದ ಪ್ರೊ.ಅಮೃತೇಶ್ವರ ಬಿ.ಜಿ ಅವರು ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಒಟ್ಟು ಎಂಟು ವಿದ್ಯಾರ್ಥಿಗಳು 3 ನಿಮಿಷಗಳ ಅವಧಿಗೆ ತಾವು ಆಯ್ಕೆ ಮಾಡಿಕೊಂಡ ವಿಷಯದ ಕುರಿತು ಮಾತನಾಡಲಿದ್ದಾರೆ. ವಿದ್ಯಾರ್ಥಿಗಳ ಈ ಕಾರ್ಯಕ್ರಮವನ್ನು ವೀಕ್ಷಿಸಿ (ಐಕ್ಯೂಎಸಿ ಕೊಠಡಿ) ರೇಡಿಯೊದಲ್ಲಿ ಆಲಿಸಿ ಆ ಮೂಲಕ ವಿದ್ಯಾರ್ಥಿಗಳಿಗೆ ಶುಭಹಾರೈಸಲು ಪ್ರಾಂಶುಪಾಲರು ಕೋರಿದ್ದಾರೆ.
ಕಾಲೇಜಿನ ವಿದ್ಯಾರ್ಥಿಗಳಾದ ತೇಜಸ್ವಿನಿ – ಜೆ ಹೆಚ್ ಪಟೇಲ್, ಸಿಂಚನ ಎ ಜೆ – ಎಚ್ ತಿಪ್ಪೇರುದ್ರಸ್ವಾಮಿ, ಪ್ರಿಯಾಂಕ- ಡಾ.ಎಂ ಚಿದಾನಂದಮೂರ್ತಿ, ಸಿಂಚನ ಎಸ್- ಬೀಚಿ, ಸ್ವಾಮಿ ಕೆ ಆರ್- ಡಾ.ಎಚ್.ಎಸ್. ವೆಂಕಟೇಶಮೂರ್ತಿ, ಆಕಾಶ – ಲೋಕೇಶ್ ಅಗಸನಕಟ್ಟೆ, ಶ್ರಾವಣಕುಮಾರಿ – ಸೂಳೆಕೆರೆ, ಪವನ್ ಕುಮಾರ್ – ಸಂತೇಬೆನ್ನೂರು ಪುಷ್ಕರಣಿ ಕುರಿತು ಮಾತನಾಡಲಿದ್ದಾರೆ.
ಭದ್ರಾವತಿ ಆಕಾಶವಾಣಿ ಕೇಂದ್ರ ಆಲಿಸಲು Play store ನಲ್ಲಿ Newsonair-Prasarbharathi app ಲಭ್ಯವಿದ್ದು,ಇದನ್ನು ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ಶೋತೃಗಳು ಈ ಕಾರ್ಯಕ್ರಮವನ್ನು ಆಲಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243