ದಿನದ ಸುದ್ದಿ
ಹೆದ್ದಾರಿಯಲ್ಲಿ ಸರಣಿ ಅಪಘಾತ | ತಪ್ಪಿದ ಅನಾಹುತ
ಸುದ್ದಿದಿನ ಡೆಸ್ಕ್ | ಮಂಡ್ಯ ನಗರದ ಕುರುಬರ ವಸತಿ ನಿಲಯದ ಎದುರು ಅಫೆ ಆಟೋ, ಅಂಬಾಸಿಡರ್ ಕಾರಿಗೆ ಡೀಸೆಲ್ ಟ್ಯಾಂಕರ್ ಡಿಕ್ಕಿ ಹೊಡೆದಿದೆ.
ವೇಗವಾಗಿ ಬಂದು ಎರಡು ವಾಹನಕ್ಕೆ ಟ್ಯಾಂಕರ್ ಡಿಕ್ಕಿ ಹೊಡೆದ ರಭಸಕ್ಕೆ ವಿದ್ಯುತ್ ಕಂಬಕ್ಕೆ ಗುದ್ದಿದ್ದು, ವಿದ್ಯುತ್ ಕಂಬ ಮುರುದು ಹೋಗಿದೆ.
ಘಟನೆಯಲ್ಲಿ ಕಾರಿನ ಡೀಸೆಲ್ ಹೊಡೆದು ರಸ್ತೆ ಪಾಲಾಗಿದ್ದು, ಕಾರಿನಲ್ಲಿದ್ದ ಮೂವರು, ಅಫೆ ಆಟೋದಲ್ಲಿದ್ದ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಡಿಸೇಲ್ ಟ್ಯಾಂಕರ್ ಚಾಲಕ ಪರಾರಿಯಾಗಿದ್ದಾನೆ.
ಸರಣಿ ಅಪಘಾತದಿಂದ ಕೆಲವೊತ್ತು ಹೆದ್ದಾರಿ ಸಂಚಾರಿ ಅಸ್ತವ್ಯಸ್ತವಾಗಿತ್ತು. ನಂತರ ಅಪಘಾತವಾದ ವಾಹನ ತೆರವುಗೊಳಿಸಿದ ಸಂಚಾರ ಪೊಲೀಸರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401