ದಿನದ ಸುದ್ದಿ
ಲಾರಿಗೆ ಕಾರು ಡಿಕ್ಕಿ : ದುರ್ಮರಣಕ್ಕೀಡಾದ ತಾಯಿ-ಮಗ
ಸುದ್ದಿದಿನ,ಚಿತ್ರದುರ್ಗ: ಲಾರಿಗೆ ಇನೋವಾ ಕಾರು ಡಿಕ್ಕಿ ಹೊಡೆದು ತಾಯಿ-ಮಗ ಸಾವನ್ನಪ್ಪಿದ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಬಳಿ ನಡೆದಿದೆ.
ಇನೋವಾ ಕಾರಿನಲ್ಲಿದ್ದ ಜಾನವಿ (55), ಪುತ್ರ ಸುದರ್ಶನ (30) ಮೃತ ಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಕಾರಿನಲ್ಲಿದ್ದವರು ತೀರ್ಥಹಳ್ಳಿ ಮೂಲದವರು ಎಂದು ತಿಳಿದು ಬಂದಿದೆ. ಗಾಯಾಳುಗಳನ್ನ ಹಿರಿಯೂರು ತಾಲೂಕಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರಕರಣ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401