ದಿನದ ಸುದ್ದಿ
ವಿಡಿಯೋ | ದಾವಣಗೆರೆ : ನೋಡು ನೋಡುತ್ತಿದ್ದಂತೆ ಸುಟ್ಟೋಯ್ತು ಕಾರು..!?
ಸುದ್ದಿದಿನ, ದಾವಣಗೆರೆ: ಬ್ಯಾಟರಿಯಲ್ಲಿ ಶಾರ್ಟ್‌ಸಕ್ರ್ಯೂಟ್ ಉಂಟಾದ ಪರಿಣಾಮ ಕಾರಿನ ಮುಂಭಾಗ ಪೂರ್ಣ ಸುಟ್ಟು ಹೋಗಿರುವ ಘಟನೆ ಸೋಮವಾರ ಮಧ್ಯಾಹ್ನ ನಗರದ ಅಂಬೇಡ್ಕರ್ ವೃತ್ತದಲ್ಲಿ ನಡೆದಿದೆ.
ಈ ಕಾರು ನಗರದ ನರಸರಾಜ ರಸ್ತೆಯ ವಾಸಿ ಅಶ್ರಫ್ ಎನ್ನುವರದ್ದಾಗಿದೆ. ಮಾರುತಿ ಕಾರನ್ನು ಅಂಬೇಡ್ಕರ್ ವೃತ್ತದಲ್ಲಿ ನಿಲ್ಲಿಸಿ ಕೆಲಸ ನಿಮಿತ್ತ ಹೊರ ಹೋದಾಗ ಬ್ಯಾಟರಿಯಲ್ಲಿ ಕಿಡಿ ಕಾಣಿಸಿ ಕಾರಿನ ಸುತ್ತ ಅಂಟಿಕೊಂಡಿದೆ. ಮುಂಭಾಗದ ಕಾರಿನ ಚಕ್ರ ಹಾಗೂ ಬಾನಟ್ ಬೆಂಕಿಗೆ ಆಹುತಿಯಾಗಿದ್ದು, ರೂ.1.50 ಲಕ್ಷ ನಷ್ಟ ಸಂಭವಿಸಿದೆ. ಸ್ಥಳಕ್ಕೆ ಅಗ್ನಿ ಶಾಮಕ ಅಧಿಕಾರಿ ಬಸವಪ್ರಭುಶರ್ಮ ನೇತೃತ್ವದಲ್ಲಿ ಬಂದ ರವೀಂದ್ರಕುಮಾರ್, ರವಿ, ಅಶೋಕ ನಾಯ್ಕ, ಶಬ್ಬರ್ ತಂಡ ಹೆಚ್ಚಿನ ಅನಾಹುತವಾಗುವುದನ್ನು ತಪ್ಪಿಸಿದೆ. ಕಾರಿಗೆ ಬೆಂಕಿ ಹತ್ತಿದ ಪರಿಣಾಮ ಕೆಲ ಕಾಲ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.
ವಿಡಿಯೋ ನೋಡಿ
ಸುದ್ದಿದಿನ.ಕಾಂ|ವಾಟ್ಸಾಪ್|9986715401