ದಿನದ ಸುದ್ದಿ

ಪ್ರವಾಸಿ ಟ್ಯಾಕ್ಸಿ ಖರೀದಿಸಲು ಸಹಾಯ ಧನಕ್ಕಾಗಿ ಅರ್ಜಿ ಆಹ್ವಾನ

Published

on

ಸುದ್ದಿದಿನ,ಕೋಲಾರ‌ : ಪ್ರವಾಸೋದ್ಯಮ ಇಲಾಖೆಯಿಂದ 2019-20 ನೇ ಸಾಲಿನಲ್ಲಿ ಎಸ್.ಸಿ.ಎಸ್.ಪಿ, ಟಿಎಸ್‍ಪಿ, ಓಬಿಸಿ ಯೋಜನೆಯಡಿ ಪರಿಶಿಷ್ಟ ಜಾತಿ 7 ಮತ್ತು ಪರಿಶಿಷ್ಟ ಪಂಗಡ 2 ಹಾಗೂ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ವರ್ಗ 07 ಒಟ್ಟು 16 ಹಾಗೂ 2015-16 ಮತ್ತು 2016-17ರ ಪರಿಶಿಷ್ಟ ಪಂಗಡ 05, ಓಬಿಸಿ 27 ಒಟ್ಟು 32 ವಿದ್ಯಾವಂತ ನಿರುದ್ಯೋಗಿಗಳಿಗೆ ಪ್ರವಾಸಿ ಟ್ಯಾಕ್ಸಿ ಖರೀದಿಸಲು ತಲಾ ರೂ 3 ಲಕ್ಷಗಳಂತೆ ಸಹಾಯಧನ ನೀಡಲಾಗುವುದು.

ಅರ್ಜಿಗಳನ್ನು ದಿನಾಂಕ: 12-06-2019 ರಿಂದ 11-07-2019 ರವರೆಗೆ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ದ್ವಿಪತ್ರಿಯಲ್ಲಿ ಕೊನೆಯ ದಿನಾಂಕ: 11-07-2019 ಸಂಜೆ 4.00 ಗಂಟೆಯೊಳಗೆ ಸಲ್ಲಿಸಬೇಕು.

ಇಚ್ಛೆಯುಳ್ಳವರು ಅರ್ಜಿಗಳನ್ನು ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಛೇರಿ ಪ್ರವಾಸೋದ್ಯಮ ಇಲಾಖೆ #17, 2ನೇ ಮಹಡಿ, ನೂತನ ಜಿಲ್ಲಾಧಿಕಾರಿಗಳ ಕಛೇರಿ ಕಟ್ಟಡ, ಕೋಲಾರ ಇವರ ಕಛೇರಿಯಲ್ಲಿ ಪಡೆಯಬಹುದಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version