ದಿನದ ಸುದ್ದಿ
ಸೆಕ್ಷನ್ 377 ಅಡಿ 4690 ಪ್ರಕರಣಗಳು ದಾಖಲು; ಸುಪ್ರೀಂ ತೀರ್ಪುನಿಂದ ಮುಕ್ತಿ
ಸುದ್ದಿದಿನ ಡೆಸ್ಕ್: ಗೇ ಸೆಕ್ಸ್ ಪ್ರಕರಣಗಳಲ್ಲಿ ಕೇರಳ ಮತ್ತು ಉತ್ತರ ಪ್ರದೇಶ ಟಾಪ್ ಲಿಸ್ಟ್ ನಲ್ಲಿದ್ದು, ಸೆಕ್ಷನ್ 377 ಅಡಿ 2014 ಮತ್ತು 2016ನೇ ಸಾಲಿನಲ್ಲಿ 4690 ಪ್ರಕರಣಗಳು ದಾಖಲಾಗಿವೆ. ಸುಪ್ರೀಂಕೋರ್ಟ್ ಈಚೆಗೆ ಸಲಿಂಗಕಾಮದ ಬಗ್ಗೆ ತೀರ್ಪು ನೀಡಿತ್ತು ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ರಾಷ್ಟ್ರೀಯ ಕ್ರೈಮ್ ರೆಕಾರ್ಡ್ಸ್ ಬ್ಯೂರೊ ಪ್ರಕಾರ ಸೆಕ್ಷನ್ 377 ಅಡಿ 2016ರಲ್ಲಿ 2,195, 2015ರಲ್ಲಿ 1,347 ಹಾಗೂ 2014ರಲ್ಲಿ 1,148 ಪ್ರಕರಣಗಳು ದಾಖಲಾಗಿವೆ.2016ರಲ್ಲಿ 999 ಪ್ರಕರಣಗಳೊಂದಿಗೆ ಉತ್ತರ ಪ್ರದೇಶ ಟಾಪ್ ನಲ್ಲಿದ್ದು, ನಂತರದ ಸ್ಥಾನವನ್ನು ಕೇರಳ ಪಡೆದುಕೊಂಡಿದೆ.
ದೆಹಲಿಯಲ್ಲಿ 183, ಮಹಾರಾಷ್ಟ್ರದಲ್ಲಿ 170 ಪ್ರಕರಣಗಳು ದಾಖಲಾಗಿವೆ. ಎನ್ಸಿಆರ್ಬಿ ಪ್ರಕಾರ 2015ರಲ್ಲಿ ಅತ್ಯಧಿಕ ಪ್ರಕರಣಗಳು ದಾಖಲಾಗಿದ್ದು, ಉತ್ತರ ಪ್ರದೇಶದಲ್ಲಿ 239 ಪ್ರಕರಣ ದಾಖಲಾಗಿವೆ. 2015ರಲ್ಲಿ ಕೇರಳ ಮತ್ತು ಮಹಾರಾಷ್ಟ್ರದಲ್ಲಿ 159, ಹರಿಯಾಣದಲ್ಲಿ 111 ಮತ್ತು ಪಂಜಾಬಿನಲ್ಲಿ 81 ಗೇ ಸೆಕ್ಸ್ ಪ್ರಕರಣಗಳು ದಾಖಲಾಗಿವೆ.
ದೇಶದಲ್ಲಿ 2015ರಲ್ಲಿ 1,347 ಪ್ರಕರಣಗಳು ದಾಖಲಾಗಿದ್ದು, 814 ಪ್ರಕರಣಗಳಲ್ಲಿ ಮಕ್ಕಳು ಬಲಿಯಾಗಿವೆ. ಇದರಲ್ಲಿ ಉತ್ತರ ಪ್ರದೇಶದಲ್ಲಿ 179, ಕೇರಳದಲ್ಲಿ 142 ಮಹಾರಾಷ್ಟ್ರದಲ್ಲಿ 116, ಹರಿಯಾಣದಲ್ಲಿ 63 ಪ್ರಕರಣಗಳು ದಾಖಲಾಗಿವೆ.
ಒಮ್ಮತದ ಸಲಿಂಗಕಾಮಿ ಲೈಂಗಿಕತೆಯ ಆರೋಪ ಮತ್ತು ವಿಚಾರಣೆ ಎದುರಿಸುತ್ತಿರುವ ವ್ಯಕ್ತಿಗಳಿಗೆ ಸುಪ್ರೀಂ ಕೋರ್ಟ್‌ನ ಸೆಪ್ಟೆಂಬರ್ 6ರ ತೀರ್ಪು ಭರವಸೆಯ ಕಿರಣ ನೀಡಿದಂತಾಗಿದೆ.
ಲೆಸ್ಬಿಯನ್, ಗೇ, ಬೈಸೆಕ್ಸುವಲ್, ಟ್ರಾನ್ಸ್ಜೆಂಡರ್ ಮತ್ತು ಕ್ವೀರ್ (ಎಲ್ಜಿಬಿಟಿಕ್ಯು) ಸಮುದಾಯದ ಸದಸ್ಯರು ದೇಶದ ಇತರ ನಾಗರಿಕರಂತೆ ಸಾಂವಿಧಾನಿಕ ಹಕ್ಕುಗಳನ್ನು ಹೊಂದಿದ್ದಾರೆ ಎಂದು ಮುಖ್ಯ ನ್ಯಾಯಮೂರ್ತಿ ದಿಪಾಕ್ ಮಿಶ್ರ ನೇತೃತ್ವದ ಐವರು ನ್ಯಾಯಾಧೀಶರ ಪೀಠ ಸರ್ವಾನುಮತದಿಂದ ತೀರ್ಪು ನೀಡಿದೆ.