ಲೈಫ್ ಸ್ಟೈಲ್
ಪೈಲ್ಸ್ ನಿವಾರಣೆಗೆ ಇಲ್ಲಿದೆ ಮನೆ ಮದ್ದು..!
ಪೈಲ್ಸ್ ಮತ್ತು ಆಮಶಂಕೆಯನ್ನು ಗುಣಪಡಿಸಲು ಕೆಲವು ಮನೆ ಮದ್ದುಗಳ ಟಿಪ್ಸ್ ಇಲ್ಲಿದೆ.
- ಆಗತಾನೆ ಹಿಂಡಿದ ಒಂದು ಬಟ್ಟಲು ಹಸುವಿನ ನೊರೆ ಹಾಲಿಗೆ ಒಂದು ನಿಂಬೆ ಹಣ್ಣಿನ ರಸವನ್ನು ಹಿಂಡಿಕೊಂಡು ಒಂದು ವಾರದವರೆಗೆ ಸೇವಿಸಿದರೆ ಮೂಲವ್ಯಾಧಿ ಗುಣವಾಗುವುದು.
- ಅರಿಶಿಣದ ಕೊನೆಯನ್ನು ನುಣ್ಣಗೆ ಅರೆದು ಮಜ್ಜಿಗೆಯಲ್ಲಿ ಹತ್ತು ದಿನಗಳ ಕಾಲ ಸೇವಿಸಿದರೆ ಮೂಲವ್ಯಾಧಿ, ರಕ್ತಬೇದಿ ನಿವಾರಣೆಯಾಗುತ್ತದೆ.
- ಬಾಳೆಹಣ್ಣನ್ನು ಮಜ್ಜಿಗೆಯೊಂದಿಗೆ ಮೂಲವ್ಯಾಧಿ ರೋಗಿಗೆ ಕೊಟ್ಟರೆ ಗುಣವಾಗುತ್ತದೆ.
- ಬಾಳೆ ಮರದ ಕಾಂಡದ ರಸ ಹಿಂಡಿ ಎಳೆ ನೀರಿನೊಂದಿಗೆ ಕುಡಿದರೆ ಆಮಶಂಕೆ, ಮೂಲವ್ಯಾಧಿ ರೋಗಿಗಳಿಗೆ ಶೀಘ್ರ ಗುಣ ಕಂಡು ಬರುತ್ತದೆ.
- ನುಗ್ಗೆಯ ಎಲೆಗಳನ್ನು ಅರೆದು ಮೂಲವ್ಯಾಧಿಯ ಮೊಳಕೆಗಳಿಗೆ ಹಚ್ಚಿದರೆ ಮೊಳಕೆಗಳು ನಶಿಸಿ ಹೋಗುವುದು.
- ಮೂಲವ್ಯಾಧಿಯಿಂದ ಬಳಲುತ್ತಿರುವವರು ಹಸಿಮೂಲಂಗಿಯನ್ನು ಸಾಕಷ್ಟು ತಿನ್ನುವುದರಿಂದ ಲಾಭವುಂಟು.
- ಎಕ್ಕ ಮತ್ತು ನುಗ್ಗೆಯ ಎಲೆಗಳನ್ನು ನುಣ್ಣಗೆ ಅರೆದು ಆಸನಾಗ್ರದಲ್ಲಿ ಕಾಣಿಸಿಕೊಳ್ಳುವ ಮೊಳಕೆಗಳಿಗೆ ಹಚ್ಚುತ್ತಿದ್ದರೆ ಮೊಳಕೆಗಳು ನಾಶವಾಗುವುದು.
- ಆಗತಾನೇ ಹಿಂಡಿದ ಹಸುವಿನ ಒಂದು ಬಟ್ಟಲು ಹಾಲಿಗೆ ಒಂದು ನಿಂಬೆ ಹಣ್ಣನ್ನು ಹಿಂಡಿ, ಕಾಲವಿಳಂಬ ಮಾಡದೆ ಸೇವಿಸಿ ಈ ಚಿಕಿತ್ಸೆಯಿಂದ ಒಂದು ವಾರದೊಳಗೆ ಮೂಲವ್ಯಾಧಿಯಲ್ಲಿ ಗುಣ ಕಂಡು ಬರುವುದು.
- ಹಸಿರು ಕಾಳನ್ನು ನೀರಿನಲ್ಲಿ ನೆನೆಹಾಕಿ ಒಂದೆರಡು ಗಂಟೆಗಳ ನಂತರ ನೀರನ್ನು ಬಸಿಯಿರಿ. ಈ ನೀರನ್ನು ರೋಗಿಗೆ ಕುಡಿಸುತ್ತಿದ್ದರೆ ರೋಗ ಉಲ್ಬಣವಾಗುವುದಿಲ್ಲ.
ಸುದ್ದಿದಿನ.ಕಾಂ|ವಾಟ್ಸಾಪ್|9980346243