ರಾಜಕೀಯ
ಡಿಕೆಶಿ ಸಂಬಂಧಿಗಳ ಮೇಲೆ ಸಿಬಿಐ ರೈಡ್?
ಸುದ್ದಿ ದಿನ ಡೆಸ್ಕ್: ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಹಾಗೂ ಸಹೋದರ ಡಿಕೆ ಸುರೇಶ್ ಅವರ ಸಂಬಂಧಿಗಳು ಮತ್ತು ಸ್ನೇಹಿತರ ಮನೆ ಮೇಲೆ ಸಿಬಿಐ ಬುಧವಾರ ದಾಳಿ ನಡೆಸಿರಬಹುದಾದ ಸಾಧ್ಯತೆಗಳಿವೆ.
ನೋಟು ರದ್ದಾದ ಸಮಯದಲ್ಲಿ ಅಕ್ರಮವಾಗಿ ತಮ್ಮ ಬಳಿ ಇದ್ದ ಹಳೇ ನೋಟುಗಳನ್ನು ಹೊಸ ಕರೆನ್ಸಿಗಳೊಂದಿಗೆ ಪರಿವರ್ತಿಸಿಕೊಂಡ ಆರೋಪದ ಮೇಲೆ ಈ ದಾಳಿ ನಡೆದಿರಬಹುದು ಎಂದು ಕೇಂದ್ರ ಸರಕಾರದ ಮೂಲಗಳಿಂದ ತಿಳಿದುಬಂದಿದೆ.
ಡಿಕೆಶಿ ಅವರಿಗೆ ಸೇರಿದ ಹಣವನ್ನು ಹೊಸ ನೋಟುಗಳಾಗಿ ಪರಿವರ್ತಿಸಿಕೊಟ್ಟಿದ್ದಾಗಿ, ನೋಟು ಅಮಾನ್ಯ ಪ್ರಕರಣವೊಂದರಲ್ಲಿ ಸಿಲುಕಿರುವ ಬ್ಯಾಂಕ್ ಮ್ಯಾನೇಜರ್‍ವೊಬ್ಬರು ಬಾಯಿಬಿಟ್ಟಿದ್ದು, ಈ ಹಿನ್ನೆಲೆಯಲ್ಲಿ ಡಿಕೆ ಸುರೇಶ್ ಸೇರಿದಂತೆ ಹನ್ನೊಂದು ಜನರ ಮನೆ ಮೇಲೆ ಸಿಬಿಐ ರೈಡ್ ನಡೆಸಿದೆ ಎಂದು ಹೇಳಲಾಗುತ್ತಿದೆ.
ಮೋದಿ ಕಿತಾಪತಿ
ಪ್ರಕರಣ ಸಂಬಂಧಪಟ್ಟಂತೆ ಸುದ್ದಿಗೋಷ್ಠಿ ನಡೆಸಿದ ಡಿಕೆ ಶಿವಕುಮಾರ್ ಹಾಗೂ ಸಹೋದರ ಡಿಕೆ ಸುರೇಶ್ ಅವರು ಕೇಂದ್ರ ಸರಕಾರ ಉದ್ದೇಶ ಪೂರ್ವಕವಾಗಿ ತಮ್ಮ ಮೇಲೆ ಕಣ್ಣಿಟ್ಟಿರುವುದಾಗಿ ಆರೋಪಿಸಿದ್ದಾರೆ.
ಗುಜರಾತ್‍ನ ಬಿಜೆಪಿ ನಾಯಕರನ್ನು ಬಿಡದಿ ರೆಸಾರ್ಟ್‍ನಲ್ಲಿ ಕರೆ ತಂದಿದ್ದಾಗಿಇಂದಲೂ ಮೋದಿ ಸರಕಾರ ತಮ್ಮ ಮೇಲೆ ಕಣ್ಣಿಟ್ಟಿದ್ದು, ಪರಿಣಾಮವಾಗಿ ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ, ಸಿಬಿಐ ಮೊದಲಾದ ಸಂಸ್ಥೆಗಳನ್ನು ಬಳಸಿಕೊಂಡು ತಮ್ಮ ಕುಟುಂಬಕ್ಕೆ ಕಿರುಕೊಳ ಕೊಡಲಾಗುತ್ತಿದೆ ಎಂದು ಡಿಕೆ ಸಹೋದರರು ಆರೋಪಿಸಿದ್ದಾರೆ.
ಬಿಜೆಪಿಗೆ ಹೊಟ್ಟೆ ಕಿಚ್ಚು
ವಿಧಾನಸಭಾ ಚುನಾವಣೆ ನಂತರ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರಕಾರ ರಚನೆಯಲ್ಲಿ ತಾವು ಹಾಗೂ ತಮ್ಮ ಸಹೋದರರ ಪಾತ್ರ ಪ್ರಮುಖವಾಗಿರುವುದನ್ನು ಮನಗಂಡು ಉದ್ದೇಶಪೂರ್ವಕವಾಗಿ ದಾಳಿ ನಡೆಸಲಾಗುತ್ತಿದೆ ಎಂದೂ ಡಿಕೆಶಿ ಆರೋಪಿಸಿದ್ದಾರೆ.