ದಿನದ ಸುದ್ದಿ
ಸಿಬಿಎಸ್ಸಿ 12 ನೇ ತರಗತಿ ಪರೀಕ್ಷೆ ದಿನಾಂಕ ನಿಗಧಿ : ಜುಲೈ ನಿಂದ ಪರೀಕ್ಷೆಗಳು ಆರಂಭ
ಸುದ್ದಿದಿನ,ನವದೆಹಲಿ : ದೇಶದಲ್ಲಿ ಕೊರೋನಾ ಭೀತಿಯ ಹಿನ್ನೆಲೆಯಲ್ಲಿ ಲಾಕ್ ಡೌನ್ ನಿಂದಾಗಿ ಮುಂದೂಡಲ್ಪಟ್ಟಿದ್ದಂತ ಸಿಬಿಎಸ್ಸಿಯ 12ನೇ ತರಗತಿಯ ಪರೀಕ್ಷೆಯ ದಿನಾಂಕವನ್ನು ನಿಗಧಿಗೊಳಿಸಲಾಗಿದೆ. ಪರೀಕ್ಷೆಗಳು ಜುಲೈ 1ರಿಂದ 15ರವರೆಗೆ ನಡೆಸಲಾಗುತ್ತದೆ ಎಂದು ಕೇಂದ್ರ ಹೆಚ್ ಆರ್ ಡಿ ಸಚಿವ ರಮೇಶ್ ಪೊರ್ಕಿಯಾಳ್ ಟ್ವೀಟ್ ಮಾಡುವುದರ ಮೂಲಕ ತಿಳಿಸಿದ್ದಾರೆ.
ಪರೀಕ್ಷೆಯ ಕುರಿತು ಮಾಹಿತಿ ನೀಡಿರುವ ಕೇಂದ್ರ ಹೆಚ್ ಆರ್ ಡಿ ಸಚಿವ ರಮೇಶ್ ಪೊರ್ಕಿಯಾಳ್ ಅವರು, ಕೊರೋನಾ ಪರಿಣಾಮ ಮುಂದೂಡಲ್ಪಟ್ಟಿದ್ದಂತ 12ನೇ ತರಗತಿಯ ಸಿಬಿಎಸ್ಸಿಯ ಪರೀಕ್ಷೆಗಳನ್ನು ಜುಲೈ 1ರಿಂದ 15ರವರೆಗೆ ನಡೆಸಲು ನಿರ್ಧರಿಸಲಾಗಿದೆ. ಪರೀಕ್ಷೆಯ ವೇಳೆ ಎಲ್ಲರೂ ಕಡ್ಡಾಯವಾಗಿ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳ ಬೇಕು
ಎಂದು ಸೂಚಿಸಿದ್ದಾರೆ.
ಹೆಚ್ ಆರ್ ಡಿ ಸಚಿವ ರಮೇಶ್ ಪೊರ್ಕಿಯಾಳ್ ಟ್ವೀಟ್ : ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://twitter.com/DrRPNishank/status/1262290056129044480?s=19
ಸುದ್ದಿದಿನ.ಕಾಂ|ವಾಟ್ಸಾಪ್|9980346243