ದಿನದ ಸುದ್ದಿ

ಸಿಬಿಎಸ್‌ಸಿ 10-12 ನೇ ತರಗತಿ ಅಂತಿಮ ಪರೀಕ್ಷೆಗಳು ಫೆಬ್ರವರಿ 15 ರಿಂದ ಆರಂಭ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ಡೆಸ್ಕ್ : ಸಿಬಿಎಸ್‌ಸಿ 10-12 ನೇ ತರಗತಿ ಅಂತಿಮ ಪರೀಕ್ಷೆ ಫೆಬ್ರವರಿ 15 ರಿಂದ ಆರಂಭವಾಗಲಿದೆ. ಆದರೆ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಇನ್ನು ನಿಗದಿಯಾಗಿಲ್ಲ.

2023ರ ಜನವರಿ 1 ರಿಂದ ಪ್ರಾಯೋಗಿಕ ಪರೀಕ್ಷೆಗಳು ಆರಂಭವಾಗಲಿವೆ ಎಂದು ಸಿಬಿಎಸ್‌ಸಿ ಮಂಡಳಿ ಪ್ರಕಟಿಸಿದೆ.
ಪ್ರಾಯೋಗಿಕ ಪರೀಕ್ಷೆಗಳಿಗಾಗಿ ಪಠ್ಯಕ್ರಮವನ್ನು 2023ಜನವರಿ ಒಂದರ ಒಳಗಾಗಿ ಪೂರ್ಣಗೊಳಿಸುವಂತೆ ಶಾಲೆಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ.

12ನೇ ತರಗತಿಯ ಪ್ರಾಕ್ಟಿಕಲ್ ಪರೀಕ್ಷೆಗಳನ್ನು ಸಿಬಿಎಸ್‌ಸಿ ಮಂಡಳಿ ನೇಮಕ ಮಾಡಿದ ಬಾಹ್ಯ ಪರೀಕ್ಷಕರು ನಡೆಸಲಿದ್ದಾರೆ. ಆದರೆ 10ನೇ ತರಗತಿಯ ಪ್ರಾಯೋಗಿಕ ಪರೀಕ್ಷೆಗಳನ್ನು ಆಂತರಿಕ ಪರೀಕ್ಷಕರೇ ನಡೆಸುತ್ತಾರೆ ಎಂದು ಮಂಡಳಿ ಸ್ಪಷ್ಟಪಡಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version