ದಿನದ ಸುದ್ದಿ

ಲೇಟಾಗಿ ಬಂದ್ರೆ ಸಿಬಿಎಸ್ಸಿ ಪರೀಕ್ಷೆ ಬರಿಯಂಗಿಲ್ಲ!

Published

on

ಸುದ್ದಿದಿನ ಡೆಸ್ಕ್: ಟ್ರಾಫಿಕ್ ತೊಂದರೆ, ಬಸ್ ತಡ, ಗಾಡಿ ಕೆಟ್ಟೋಗಿದೆ ತಡವಾಗಿ ಬಂದಿದ್ದಕ್ಕೆ ಹೀಗೆಲ್ಲಾ ಕಾರಣಗಳನ್ನು ನೀಡಿ ಇನ್ಮುಂದೆ ಸಿಬಿಎಸ್ಸಿ ಹತ್ತು ಮತ್ತು ಹನ್ನೆರಡನೇ ತರಗತಿ ಪರೀಕ್ಷೆ ಬರೆಯುವಂತಿಲ್ಲ.
ಜೆಇಇ, ನೀಟ್, ಕ್ಯಾಟ್, ಗೇಟ್ ಪರೀಕ್ಷೆಗೆ ವಿಧಿಸಲಾಗಿರುವ ಕಾನೂನನ್ನು ಸಿಬಿಎಸ್ಸಿ ಪರೀಕ್ಷೆಗೂ ಅನ್ವಯಿಸಲಾಗಿದ್ದು, ತಡವಾಗಿ ಬಂದ ವಿದ್ಯಾರ್ಥಿಗಳಿಗೆ ಪರೀಕ್ಷೆ ನೀಡದಂತೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಆದೇಶಿಸಿ ಅಧಿಸೂಚನೆ ಹೊರಡಿಸಿದ್ದು, 2019ರಿಂದ ಇದು ಜಾರಿಗೆ ಬರಲಿದೆ.
ಈ ವರ್ಷ ಸಿಬಿಎಸ್ಸಿ ಪರೀಕ್ಷೆಗೆ ಈ ಕಾನೂನು ಅನ್ವಯವಾಗುವುದಿಲ್ಲ. ಆದರೆ, ಮುಂದಿನ ವರ್ಷದಿಂದ ತಡವಾಗಿ ಬರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ನೀಡುವಂತಿಲ್ಲ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.
ಹೊಸ ನಿಯಮದ ಪ್ರಕಾರನ ವಿದ್ಯಾರ್ಥಿಗಳು 10.15ಕ್ಕೆ ಸರಿಯಾಗಿ ಪರೀಕ್ಷಾ ಕೊಠಡಿಯಲ್ಲಿರಬೇಕು. ಹದಿನೈದು ನಿಮಿಷಗಳ ಕಾಲ ಪತ್ರಿಕೆಯನ್ನು ಓದಿ 10.30ಕ್ಕೆ ಸರಿಯಾಗಿ ಪರೀಕ್ಷೆ ಬರೆಯಲು ಶುರು ಮಾಡಬೇಕು.

Leave a Reply

Your email address will not be published. Required fields are marked *

Trending

Exit mobile version