ದಿನದ ಸುದ್ದಿ
ಸಿ ಬಿ ಎಸ್ ಇ ಶಾಲೆಗಳಲ್ಲಿ ಶುಲ್ಕ ಹೆಚ್ಚಳ: ಪರಿಶಿಷ್ಟ ಜಾತಿ ಪಂಗಡಕ್ಕೆ 24 ಪಟ್ಟು ಏರಿಕೆ
ಸುದ್ದಿದಿನ,ದೆಹಲಿ: ಸಿ ಬಿ ಎಸ್ ಇ ಶಾಲೆಗಳಲ್ಲಿ ಭಾರೀ ಪ್ರಮಾಣದ ಶುಲ್ಕವನ್ನು ಏರಿಸಲಾಗಿದೆ. ಇಷ್ಟು ದಿನಗಳ ಕಾಲ ಸಾಮಾನ್ಯ ವಿದ್ಯಾರ್ಥಿಗಳು 750 ರೂಪಾಯಿ ಪಾವತಿಸುತ್ತಿದ್ದರೆ, ಈಗ ಇದರ ಪ್ರಮಾಣ 1500 ರೂಪಾಯಿಗೆ ಏರಿಕೆಯಾಗಿದೆ. ಇದರ ಮೊತ್ತ ಎರಡು ಪಟ್ಟು ಏರಿಕೆಯಾಗಿದೆ.
ಎಸ್ಸಿ ಎಸ್ಟಿ ವಿದ್ಯಾರ್ಥಿಗಳು ಇದುವರೆಗೆ 50 ರೂಪಾಯಿ ಪಾವತಿಸುತ್ತಿದ್ದರು. ಆದರೆ, ಇವರು ಇನ್ನು ಮುಂದೆ 1200 ರೂಪಾಯಿ ಪಾವತಿಸಬೇಕಿದೆ. ಇದರ ಮೊತ್ತ ಇಪ್ಪತ್ತನಾಲ್ಕು ಪಟ್ಟು ಏರಿಕೆಯಾಗಿದೆ. ಇದೇ ತಿಂಗಳ 11ರಂದು ಹೊಸ ಆದೇಶವನ್ನು ಹೊರಡಿಸಲಾಗಿದ್ದು, ಎಲ್ಲ ಶಾಲೆಗಳಿಗೆ ಆದೇಶದ ಪ್ರತಿಯನ್ನು ರವಾನಿಸಲಾಗಿದೆ.