ದಿನದ ಸುದ್ದಿ
ಡ್ರಗ್ಸ್ ಪ್ರಕರಣ | ಸಿಸಿಬಿಯಿಂದ ಕಾಂಗ್ರೆಸ್ ಮುಖಂಡನ ವಿಚಾರಣೆ
ಸುದ್ದಿದಿನ,ಧಾರವಾಡ: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ ಸಿಸಿಬಿಯಿಂದ ಕಾಂಗ್ರೆಸ್ ಮುಖಂಡ ಗಿರೀಶ್ ಗದಿಗೆಪ್ಪಗೌಡರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ನಟಿ ರಾಗಿಣಿ ದ್ವಿವೇದಿ ಜೊತೆ ಸಂಪರ್ಕ ಹೊಂದಿದ್ದ ಗಿರೀಶ್ ಗದಿಗೆಪ್ಪಗೌಡರ ನಟಿಯ ಜೊತೆ ಗೋವಾಕ್ಕೆ ತೆರಳಿದ್ದ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಾಕಿಕೊಂಡಿದ್ದರು. ಈ ಸಂಬಂಧ ಗಿರೀಶ್ರನ್ನು ಸಿಸಿಬಿಅಧಿಕಾರಿಗಳು ವಿಚಾರಣೆ ಮಾಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243