ಸಿನಿ ಸುದ್ದಿ
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮೇಲೆ ಸಿಸಿಬಿ ಕಣ್ಣು..!
ಸುದ್ದಿದಿನ ಡೆಸ್ಕ್ : ಚಂದನ್ ಶೆಟ್ಟಿ ಆಯ್ತು ಈಗ ರ್ಯಾಂಬೋ 2 ಚಿತ್ರ ತಂಡಕ್ಕೆ ಸಂಕಷ್ಟಕ್ಕೀಡಾಗಿದೆ. ರ್ಯಾಂಬೋ 2 ಸಾಂಗ್ ಮೇಲೂ ಸಿಸಿಬಿ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ.
ರ್ಯಾಂಬೋ 2 ಚಿತ್ರದ ಧಮ್ ಮಾರೋ ಧಮ್ ಸಾಂಗ್ ಮೇಲೆ ಸಿಸಿಬಿಯ ಕಣ್ಣುಬಿದ್ದಿದೆ.ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ಅಧಿತಿ ಸಾಗರ್ ಗೆ ಸಮನ್ಸ್ ಸಿದ್ಧತೆ ನಡೆದಿದೆ.ಚಂದನ್ ಶೆಟ್ಟಿ ವಿಚಾರಣೆ ಬಳಿಕ ಅರ್ಜುನ್ ಜನ್ಯ ಮತ್ತು ಮುತ್ತು ಗೆ ಸಂಕಷ್ಟ ಎದುರಾಗಿದೆ.ಇಬ್ಬರಿಗೂ ಸಮನ್ಸ್ ನೀಡಲಿದೆ ಸಿಸಿಬಿ ತಂಡ.ಹಾಡಿನಲ್ಲಿ ಗಾಂಜಾ ಹೊಡಿ ಎಂಬ ಪ್ರಚೋದನೆ ಹಿನ್ನೆಲೆಯಲ್ಲಿ ಸಮನ್ಸ್ ನೀಡಲೀರೋ ಸಿಸಿಬಿ.
ಸುದ್ದಿದಿನ.ಕಾಂ|ವಾಟ್ಸಾಪ್|9986715401