/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ಶಾಕಿಂಗ್ : ಬೆಂಗಳೂರಿನ 9 ಕಡೆ ಬಾಂಬ್ ಸ್ಪೋಟಿಸಿದ್ದವರಲ್ಲಿ ಉಗ್ರ ಸಲೀಂ ಕೂಡ ಒಬ್ಬ : ಸಿಸಿಬಿ ಪೊಲೀಸ್ ರಿಂದ ಮಹತ್ವದ ಮಾಹಿತಿ ಬಯಲು..!

Published

on

ಸುದ್ದಿದಿನ, ಬೆಂಗಳೂರು : ಸಿಸಿಬಿ ಪೊಲೀಸರಿಂದ ಶಂಕಿತ ಉಗ್ರ ಸಲೀಂ ಬಂಧನ ಪ್ರಕರಣ ಸಿಸಿಬಿ ಪೊಲೀಸರಿಂದ ಮಹತ್ವದ ಮಾಹಿತಿ ಸಂಗ್ರಹವಾಗಿದೆ.ಬೆಂಗಳೂರಿನ 9 ಕಡೆಗಳಲ್ಲಿ ಬಾಂಬ್ ಸ್ಪೋಟಿಸಿದ್ದ ವರಲ್ಲಿ ಉಗ್ರ ಸಲೀಂ ಕೂಡ ಒಬ್ಬನಾಗಿದ್ದು,‌ ಸಿಸಿಬಿ ಪೊಲೀಸರಿಂದ ಸ್ಪೋಟ ನಡೆದ ಸ್ಥಳಗಳಿಗೆ ಉಗ್ರ ಸಲೀಂನನ್ನ ಕರೆದೊಯ್ದು ಮಹಜರು ನಡೆಸಲಾಗಿದೆ.

ಮಡಿವಾಳ, ಆಡುಗೋಡಿ, ಈಗಲ್ ಸ್ಟ್ರೀಟ್,
ಮೈಸೂರು ರಸ್ತೆ, ಕೋರಮಂಗಲ ಸೇರಿದಂತೆ ೮ ಕಡೆ ಕರೆದೊಯ್ದು ಮಹಜರು ಮಾಡಲಾಗಿದ್ದು,
ಸ್ಪೋಟ ನಡೆಸಿದ ಸ್ಥಳಗಳ ಮಹಜರು ಮಾಡಿ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ.

ಕೇರಳಕ್ಕೆ ಕರೆದುಕೊಂಡು ಹೋಗಲು ಸಿದ್ಧತೆ ನಡೆಸುತ್ತಿರುವ ಸಿಸಿಬಿಯು ಕೇರಳದಲ್ಲಿ ಆರೋಪಿ ಸಿಕ್ಕ ಅರಣ್ಯ ಪ್ರದೇಶ, ಮನೆ ಹಾಗೂ ಆತ ಕೆಲಸ ಮಾಡುತ್ತಿದ್ದ ಸ್ಥಳದ ಮಹಜರು ಹಾಗೂ ಸಲೀಂ ದರೋಡೆ ಪ್ರಕರಣಗಳ ಮಾಹಿತಿ ಪಡೆಯಲಿದ್ದಾರೆ ಸಿಸಿಬಿ ಪೊಲೀಸರು.

ಬೆಂಗಳೂರಿನ 8 ಕಡೆಗಳಲ್ಲಿ ಬಾಂಬ್ ಸ್ಫೋಟಕ್ಕೆ ಕಚ್ಚಾ ವಸ್ತುಗಳು ಸೇರಿದಂತೆ ಹಲವು ಸ್ಫೋಟಕಗಳನ್ನು ಕೇರಳದಿಂದ ಸಪ್ಲೈ ಮಾಡಿದ್ದ‌ ಈ ಆರೋಪಿಯನ್ನು ಕೇರಳಕ್ಕೆ ಕರೆದೊಯ್ದು ಹೋಗಿ ಪಂಚನಾಮೆ ಮಾಡಿಸಲು ಸಿದ್ಧತೆ‌ನಡೆಸಲಾಗಿದೆ. ಇನ್ನೆರಡು ದಿನಗಳಲ್ಲಿ ಕೇರಳಕ್ಕೆ ತೆರಳಲಿರುವ ಸಿಸಿಬಿ ಪೊಲೀಸರು.ಶಂಕಿತ ಉಗ್ರ ಸಲೀಂ ನನ್ನ ಕರೆದೊಯ್ದು ಕೇರಳದಲ್ಲಿ ತನಿಖೆ‌ ನಡೆಸಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version