ದಿನದ ಸುದ್ದಿ

ಧಾರವಾಡದಲ್ಲಿ ಸುತ್ತಿಗೆಯಿಂದ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ: ಹಲ್ಲೆಯ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Published

on

ಸುದ್ದಿದಿನ,ಧಾರವಾಡ: ಹಣ ವಿಚಾರವಾಗಿ ವ್ಯಕ್ತಿಯೊಬ್ಬ ಸುತ್ತಿಗೆಯಿಂದ ಮಹಿಳೆಯ ಮೇಲೆ ಮಾರಣಾಂತಿಕವಾಗಿ ತಲೆಯ ಭಾಗಕ್ಕೆ ಹೊಡೆದು ಹಲ್ಲೆ ನಡೆಸಿರುವ ಘಟನೆ ಧಾರವಾಡ ಮೆಹಬೂಬ್ ನಗರದಲ್ಲಿ ನಡೆದಿದ್ದು, ಹಲ್ಲೆ ಭಯಾನಕ ದೃಶ್ಯ ಸ್ಥಳಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮೆಹಬೂಬ್ ನಗರದ ದೊಡ್ಡಮನಿ ಹಾಲ್ ಮುಂಭಾಗದಲ್ಲಿ ಘಟನೆ ನಡೆದಿದೆ. ಧಾರವಾಡ ಆಜಾದ್ ನಗರದ ನಿವಾಸಿ ಫಾತಿಮಾ ಮಾರಣಾಂತಿಕವಾಗಿ ಹಲ್ಲೆಗೆ ಒಳಗಾದ ಮಹಿಳೆಯಾಗಿದ್ದಾಳೆ. ಹಲ್ಲೆ ಮಾಡಿದ ಆರೋಪಿ‌ ಇಕ್ಬಾಲ್ ಫಸಿನಾ ಎಂದು ಗುರುತ್ತಿಸಲಾಗಿದೆ.

ಇನ್ನೂ ಘಟನೆಯಲ್ಲಿ ಫಾತಿಮಾ ಹಾಗೂ ಹಲ್ಲೆ ಮಾಡಿದ ಇಕ್ಬಾಲ್ ಅಕ್ಕಪಕ್ಕದಲ್ಲಿ ನಿಂತುಕೊಂಡಿರುತ್ತಾರೆ. ಆಗ ಹಲ್ಲೆಕೋರನಿಗೆ ಒಂದು ಕರೆ ಬಂದಿರುತ್ತದೆ, ಮೊಬೈಲ್ ನಲ್ಲಿ ಮಾತನಾಡುತ್ತಲ್ಲೇ ಮರೆಮಾಚಿ ಇಟ್ಟುಕೊಂಡ ಬಂದಿದ್ದ ಸುತ್ತಿಗೆಯಿಂದ ಏಕಾಏಕಿ ಮಹಿಳೆಯ ತಲೆಯ ಭಾಗಕ್ಕೆ ಜೋರಾಗಿ ದಾಳಿ ನಡೆಸುತ್ತಾನೆ. ತಕ್ಷಣವೇ ಮಹಿಳೆ ಸ್ಥಳದಲ್ಲಿಯೇ ಕುಸಿದ ಬಿಳುತ್ತಾಳೆ. ನಂತರವು ಮತ್ತೆ ಎರಡು ಬಾರಿ ಹಲ್ಲೆ ಮಾಡುತ್ತಾನೆ, ಇದನ್ನು ನೋಡಿದ ಸ್ಥಳೀಯರು ತಕ್ಷಣವೇ ವ್ಯಕ್ತಿಯನ್ನು ಹಿಡಿದು ಹಲ್ಲೆ ತಡೆದು, ಮಹಿಳೆಯ ಪ್ರಾಣ ರಕ್ಷಣೆ ಮಾಡಿದ್ದಾರೆ. ಈ ಎಲ್ಲ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಸ್ಥಳೀಯರೇ ಮಹಿಳೆಯನ್ನು ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಈಗ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಮಹಿಳೆಯನ್ನು ಶಿಫ್ಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಉಪನಗ ಠಾಣೆಯ ಪೊಲೀಸರು ಪರಿಶೀಲನೆ ಕೈಗೊಂಡಿದ್ದಾರೆ.

ವಿಡಿಯೋ | ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://fb.watch/e6PR_bR6gD/

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version