ದಿನದ ಸುದ್ದಿ

ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್ ರಾಜೀನಾಮೆ: ಅರುಣ್ ಜೇಟ್ಲಿ

Published

on

ಮುಖ್ಯ ಆರ್ಥಿಕ ಸಲಹೆಗಾರ ಸುಬ್ರಮಣಿಯನ್

ಸುದ್ದಿದಿನ ಡೆಸ್ಕ್: ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಹ್ಮಣ್ಯನ್ ಕೌಟುಂಬಿಕ ಕಾರಣಗಳಿಂದಾಗಿ ರಾಜೀನಾಮೆ ಸಲ್ಲಿಸಿದ್ದು, ಅಮೆರಿಕಾದಲ್ಲಿರುವ ಕುಟುಂಬ ಸೇರಲು ಅಮೆರಿಕಾಕ್ಕೆ ಹಿಂದಿರಗಲಿದ್ದಾರೆ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಬುಧವಾರ ತಿಳಿಸಿದ್ದಾರೆ.

ಚೀಫ್ ಎಕಾನಾಮಿಕ್ ಅಡ್ವೈಸರ್ (ಸಿಇಎ) ಅರವಿಂದ್ ಸುಬ್ರಮಣಿಯನ್ ರಾಜೀನಾಮೆಗೆ ನೀಡಿರುವ ಕಾರಣ ವೈಯಕ್ತಿಕ ಮತ್ತು ಅವರಿಗೆ ಅದು ಅತ್ಯಂತ ಮುಖ್ಯವಾದುದು. ನನಗೆ ಯಾವುದೇ ಅವಕಾಶ ನೀಡದೇ ರಾಜೀನಾಮೆ ನೀಡಿದ್ದಾರೆ. ಇದಕ್ಕೆ ಒಪ್ಪಿಗೆ ಸೂಚಿಸಬೇಕಾಗಿದೆ.

ಸುಬ್ರಮಣಿಯನ್ 2014ರ ಅಕ್ಟೋಬರ್ 16ರಂದು ಮೂವರು ವರ್ಷಗಳ ಅವಧಿಗೆ ಚೀಫ್ ಎಕಾನಾಮಿಕ್ ಅಡ್ವೈಸರ್ ನೇಮಕಗೊಂಡಿದ್ದರು. ಈ ಅವಧಿ ಮುಕ್ತಾಯವಾದ ಬಳಿಕ ಸ್ವತಃ ಅವರೇ ಒಂದು ವರ್ಷದ ಅವಧಿಗೆ ಮುಂದುವರಿಸುವಂತೆ ಮನವಿ ಮಾಡಿದ್ದರಿಂದ ಅವಕಾಶ ನೀಡಲಾಗಿತ್ತು. ಇದು 2018ರ ಅಕ್ಟೋಬರ್ ಪೂರ್ಣಗೊಳ್ಳುತ್ತಿತ್ತು.

ಸುಬ್ರಮಣಿಯನ್ ತನ್ನ ಕುಟುಂಬದೊಂದಿಗೆ ದೂರವಿದ್ದು, ನೊಂದ್ದಿದೇನೆ ಎಂದು ಹೇಳಿಕೊಂಡಿದ್ದರು. ಆದರೆ, ಅವರು ತಮ್ಮ ಜವಾಬ್ದಾರಿಯನ್ನು ಉತ್ತಮವಾಗಿ ನಿಭಾಯಿಸಿದ್ದಾರೆ ಎಂದು ಜೇಟ್ಲಿ ತಿಳಿಸಿದ್ದಾರೆ.

ವೈಯಕ್ತಿಕವಾಗಿ ನಾನು ಅವರ ಸ್ಫೂರ್ತಿ, ಬುದ್ದಿವಂತಿಕೆ, ಆಲೋಚನೆ, ಚೈತನ್ಯ, ಬೆಂಬಲ ಸಿಗದಿರಬಹುದು. ಪ್ರತಿದಿನವೂ ಅನೇಕ ನನ್ನ ಕೊಠಡಿಗೆ ಬಂದು ’ಮಿನಿಸ್ಟರ್ ಎಂದು ಕರೆಯುತ್ತಾ ಅನೇಕ ವಿಷಯಗಳನ್ನು ಹೇಳುತ್ತಿದ್ದರು. ಈಗ ಅವರನ್ನು ಭಾರವಾದ ಮನಸ್ಸಿನಿಂದ ಕಳುಹಿಸಿಕೊಡಬೇಕಿದೆ. ನನಗೆ ಗೊತ್ತು ಅವರ ಮನಸ್ಸು ಇಲ್ಲಿಯೇ ಇರುತ್ತದೆ. ಅವರು ಎಲ್ಲಿಯೇ ಇದ್ದರೂ ನನಗೆ ಸಲಹೆ, ಸಹಕಾರ. ವಿಶ್ಲೇಷಣೆ ನೀಡುತ್ತಾರೆ ಎಂದು ನನಗೆ ಗೊತ್ತಿದೆ ಎಂದು ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version