ದಿನದ ಸುದ್ದಿ
ಭರ್ಜರಿಯಾಗಿ ಮುಕ್ತಾಯಗೊಂಡ ಸೆಲಿಬ್ರಿಟಿ ಗ್ರೂಮಿಂಗ್ ಎಕ್ಸ್ಪರ್ಟ ಜ್ಯೊತ್ಸನಾ ವೆಂಕಟೇಶ್ ರ MR ಮತ್ತು Mrs ಪ್ರೊಫೆಷನಲ್ಸ್ ಸ್ಪರ್ಧೆ..!
ಸುದ್ದಿದಿನ ಡೆಸ್ಕ್ |ಜುಲೈ 14 ರಂದು ಸಿಲಿಕಾನ್ ಸಿಟಿಯ ಬೆಂಗಳೂರು ಸೆಂಟ್ರಲ್ ಸೆಲಿಬ್ರಿಟಿ ಗಳಿಂದ ಕಲೆ ಕಟ್ಟಿತ್ತು. ಸಿನಿ ತಾರೆಯರು, ರೇಡಿಯೋ ಜಾಕಿ ..ಜಿಮ್ ಮಾಸ್ಟರ್..ಹೀಗೆ ಹಲವಾರು ಸೆಲಿಬ್ರಿಟಿ ಗಳು ಹಾಗೇ ಇನ್ನೂರ ಐವತ್ತು ಪ್ರೇಕ್ಷಕರು ಕಣ್ಣು ತುಂಬಿಸಿ ಕೊಂಡರು. ಸೆಲಿಬ್ರಿಟಿ ಸಿನಿ ತಾರೆ ನೇಹಾ ಸಕ್ಸೇನಾ.. ರೇಡಿಯೋ ಜಾಕಿ ತುಹೀಮ್ , ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಮುಖ್ಯ ಜಡ್ಜ್ ಗಳಾಗಿ ಶೃತಿ ಚೇತನ್, ಗಾಯತ್ರಿ ಸುರೇಶ್, ರೇಖಾ ರೆಡ್ಡಿ, ಸಂತೋಷ ರೆಡ್ಡಿ, ಪವನ್ ಶೆಟ್ಟಿ, ಸೇರಿದಂತೆ ಜೆ.ಜೆ.ಫಿಟ್ ನೆಸ್ ಮತ್ತು ಗ್ರೋಮಿಂಗ್ ವ್ಯವಸ್ಥಾಪಕರು ಜ್ಯೊತ್ಸನಾ ವೆಂಕಟೇಶ್ ಮತ್ತು ವೆಂಕಟೇಶ್ ನಾಯ್ಡು ಅವರು ಉಪಸ್ಥಿತರಿದ್ದರು.
ಇವರೆಲ್ಲರೂ ಬಂದಿದ್ದು ಸದಾ ಕೆಲಸ-ಕಚೇರಿ ಮನೆ ಅಂತ ಬಿಜಿಯಾಗಿರುವ ಸಾಫ್ಟವೇರ್ ಟೆಕ್ಕಿ , ಡಾಕ್ಟರು, ಲಾಯರ್, ಹೀಗೇ ಹಲವಾರು ರಂಗಗಳಿಂದ ಬಂದ ಸ್ಪರ್ಧಿಗಳು ಸಖತ್ ಆಗಿ ರಾಂಪ್ ವಾಕ್ ಮಾಡುವುದವನ್ನ ನೋಡೋಕೆ . ಏನು ಟೆಕ್ಕಿ-ಡಾಕ್ಟರ್ ರಾಂಪ್ ವಾಕ್ಯ ಅಂತ ಹುಬ್ಬೇರಿಸುತ್ತೀರಾ.. ಈ ಸ್ಟೋರಿ ಓದಿ.. ಈಗ ಎಲ್ಲಾ ಪ್ರೊಫೆಷನಲ್ಸ್ ಗಳನ್ನ ಗ್ರೂಮ್ ಮಾಡಿ ರಾಂಪ್ ಮೇಲೆ ನಡೆಸಿದ ಇವರಿಗೆ ತರಬೇತಿ ನೀಡಿದ ಕೀರ್ತಿ ಬೆಂಗಳೂರು ಚೆಲುವೆ ಜ್ಯೊತ್ಸನಾ ವೆಂಕಟೇಶ್ ಗೆ ಸೇರುತ್ತದೆ.
ಜ್ಯೊತ್ಸನಾ ವೆಂಕಟೇಶ್ ಫಿಟ್ ನೆಸ್ ಮತ್ತು ಗ್ರೂಮಿಂಗ್ ಎಕ್ಸ್ಪ್ರ್ಟ್ ಸಂಸ್ಥೆ ಆಯೋಜಿಸಿದ್ದ MR AND MRS PROFESSIONALS ಸ್ಪರ್ಧೆಯಲ್ಲಿ ಹಲವಾರು ರಂಗದ ಉದ್ಯೋಗಪತಿಗಳು, ಟೆಕ್ಕಿ, ಸಿಂಗರ್, ಡಾಕ್ಟರು, ಬಾಡಿಗೆ ಬಿಲ್ಡರ್ ಹೀಗೆ ಹಲವಾರು ಸ್ಪರ್ಧಿಗಳು ಸ್ಟೇಜ್ ಮೇಲೆ ಮಿಂಚಿದರು.ಬೆಂಗಳೂರು ಸೆಂಟ್ರಲ್ ಮತ್ತು ಪ್ರತಿಷ್ಠಿತ ಕುಬೇರನ್ ಸಂಸ್ಥೆ ಈ ಸ್ಪರ್ಧೆ ಯ ಪ್ರಾಯೋಜಕರಾಗಿದ್ದರು.2014ರಲ್ಲಿ ತನ್ನಂತೆಯೇ ಬ್ಯೂಟಿ ಪೆಜೆಂಟ್ ಗಳಲ್ಲಿ ಭಾಗವಹಿಸಲು ಇಚ್ಚಿಸುವ ಮಹಿಳೆಯರಿಗಾಗಿ “ಜ್ಯೊತ್ಸನಾ ವೆಂಕಟೇಶ್ ಫಿಟ್ ನೆಸ್ ಮತ್ತು ಗ್ರೂಮಿಂಗ್ ಸಂಸ್ಥೆಯನ್ನ ಪ್ರಾರಂಭಿಸಿದರು. ಹಲವಾರ ಸಾಧಕರಿಗೆಗುರುವಾಗಿ,ಮಾರ್ಗದರ್ಶಕಿಯಾಗಿ ಗೆಲುವಿನ ಹಾದಿ ಹಿಡಿಯಲು ಪ್ರೇರಣೆ ಯಾದರು. ಇವರಿಂದ ಗ್ರೂಮಿಂಗ್ ಪಡೆದು ಗೆಲುವಿನ ಶಿಖರವೇರಿದವರ ಪಟ್ಟಿ ಸಾಕಷ್ಟಿದೆ.
ಸ್ಪರ್ಧೆಯಲ್ಲಿ
ಸಾಫ್ಟ್ ವೇರ್ ಇಂಜಿನಿಯರ್ ರಮ್ಯಾ ಹಾಗೂ ಮನ್ಸೂರ್ Mr ಮತ್ತು Mrs ಪ್ರೊಫೆಷನಲ್ಸ್ ಸ್ಪರ್ಧೆ ಯ ಕಿರೀಟ ಮೂಡಿ ಗೇರಿಸಿಕೊಂಡರು.
ಶಿಲ್ಪ ಮತ್ತು ಕೃಷ್ಣ ಪ್ರಸಾದ್ ಮೊದಲನೇ ರನ್ನರ್ ಅಪ್ ಆಗಿ ಆಯ್ಕೆ ಆದರೆ, ಸಾಂಬಸಿವನ್ ಮತ್ತು ನಿಷಾ ಎರಡನೇ ರನ್ನರ್ ಅಪ್ ಆಗಿ ಆಯ್ಕೆ ಆದರು.
ಒಟ್ಟಾರೆ ಸಿಲಿಕಾನ್ ಸಿಟಿಯ ಮಂದಿ ಈ ವರ್ಣಮಯ ರಸಸಂಜೆಯಲ್ಲಿ ಸಖತ್ ಎಂಜಾಯ್ ಮಾಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986815401