ದಿನದ ಸುದ್ದಿ
ಕೇಂದ್ರೀಯ ವಿದ್ಯಾಲಯಗಳ ಪ್ರವೇಶಕ್ಕೆ ಸಂಸತ್ ಸದಸ್ಯರ ‘ವಿಶೇಷ ಕೋಟಾ’ ರದ್ದುಪಡಿಸಿದ ಕೇಂದ್ರ
ಸುದ್ದಿದಿನ ಡೆಸ್ಕ್ : ಕೇಂದ್ರೀಯ ವಿದ್ಯಾಲಯಗಳ ಪ್ರವೇಶಕ್ಕೆ ಸಂಸತ್ ಸದಸ್ಯರ ವಿಶೇಷ ಕೋಟಾವನ್ನು ಕೇಂದ್ರ ಸರ್ಕಾರ ರದ್ದುಪಡಿಸಿದೆ. 2022-23 ಮತ್ತು ಆನಂತರ ಈ ಆದೇಶ ಜಾರಿಗೆ ಬರಲಿದೆ ಎಂದು ಪ್ರವೇಶ ಮಾರ್ಗಸೂಚಿಗಳಲ್ಲಿ ತಿಳಿಸಲಾಗಿದೆ.
ಸಂಸತ್ ಸದಸ್ಯರ ಕೋಟಾ ಸೇರಿದಂತೆ ವಿಶೇಷ ಕೋಟಾಗಳಡಿ ಪ್ರವೇಶಗಳಿಗೆ ಕೇಂದ್ರೀಯ ವಿದ್ಯಾಲಯ ಸಂಘಟನೆ-ಕೆವಿಎಸ್ ಮುಂದಿನ ಆದೇಶದವರೆಗೆ ತಡೆ ನೀಡಿದ ಒಂದು ವಾರದ ನಂತರ ಈ ಆದೇಶ ಹೊರಬಿದ್ದಿದೆ.
ಕೆವಿಎಸ್‌ನ ವಿಶೇಷ ಪ್ರವೇಶ ಯೋಜನೆಯಂತೆ ಸಂಸತ್ ಸದಸ್ಯರೊಬ್ಬರು ಗರಿಷ್ಠ 10 ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ಶಿಫಾರಸ್ಸು ಮಾಡಲು ಅವಕಾಶವಿತ್ತು. ಸಂಸತ್ ಸದಸ್ಯರ ಕೋಟಾ ರದ್ದುಪಡಿಸುವುದು ಇಲ್ಲವೇ ಶಿಫಾರಸ್ಸುಗಳನ್ನು ಆಧರಿಸಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸುವುದು ಬಹು ದಿನಗಳ ಬೇಡಿಕೆಯಾಗಿತ್ತು.
ಕೆವಿಎಸ್‌ನ ಹೊಸ ಮಾರ್ಗಸೂಚಿಗಳಂತೆ ಎಂಪಿ ಕೋಟಾ ಅಲ್ಲದೆ, ಶಿಕ್ಷಣ ಸಚಿವಾಲಯದ ಉದ್ಯೋಗಿಗಳ 100 ಮಕ್ಕಳಿಗೆ ಸಂಸತ್ ಸದಸ್ಯರು ಮತ್ತು ಕೇಂದ್ರೀಯ ವಿದ್ಯಾಲಯಗಳ ನಿವೃತ್ತ ಉದ್ಯೋಗಿಗಳ ಮಕ್ಕಳಿಗೆ ಹಾಗೂ ಶಾಲಾ ಆಡಳಿತ ಸಮಿತಿ ಅಧ್ಯಕ್ಷರ ವಿವೇಚನಾ ಕೋಟಾವನ್ನು ಸಹ ರದ್ದುಪಡಿಸಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243