ದಿನದ ಸುದ್ದಿ

ಮನೆ ಕೊಳ್ಳುವವರಿಗೆ ಕೇಂದ್ರದಿಂದ ಭರ್ಜರಿ ಗಿಫ್ಟ್

Published

on

ಸುದ್ದಿದಿನ ಡೆಸ್ಕ್: ಮನೆ ಕೊಳ್ಳುವ ಆಕಾಂಕ್ಷಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಸರಕಾರ ಭರ್ಜರಿ ಗಿಫ್ಟ್ ಕೊಟ್ಟಿದೆ.
ನಿಮ್ಮ ವಾರ್ಷಿಕ ಆದಾಯ ಹದಿನೆಂಟು ಲಕ್ಷ ರೂಪಾಯಿ ಇದ್ದರೂ, ನೀವು ಪ್ರಧಾನಿ ಆವಾಸ್ ಯೋಜನೆ ಮೂಲಕ ಮನೆ ಕೊಳ್ಳಬಹುದಾಗಿದೆ.
ಕೇಂದ್ರ ನಗರಾಭಿವೃದ್ಧಿ ಮತ್ತು ವಸತಿ ಸಚಿವಾಲಯವು ಈ ಯೋಜನೆಯಲ್ಲಿ ಸೀಮಿತಗೊಳಿಸಲಾಗಿದ್ದ ಮನೆಯ ಸ್ಕ್ವೇರ್ ಫಿಟ್ ಏರಿಯಾವನ್ನು 2100ಕ್ಕೆ ಏರಿಕೆ ಮಾಡಿ ಮಂಗಳವಾರ ಆದೇಶ ಹೊರಡಿಸಿದೆ. ಜತೆಗೆ ಬಡ್ಡಿದರದ ಮೇಲಿನ ಸಬ್ಸಿಡಿಯನ್ನೂ ಹೆಚ್ಚಿಸಿದೆ.
ಈ ಮೊದಲು ಒಂದು ಬೆಡ್ ರೂಮ ಮನೆಯ್ನು ಕೊಳ್ಳಲು ಮಾತ್ರ ಈ ಯೋಜನೆ ಸಹಕಾರಿಯಾಗಿತ್ತು. ಆದರೆ, ಈಗ ಮೂರರಿಂದ ನಾಲ್ಕು ಬೆಡ್ ರೂಂ ಮನೆಯನ್ನೂ ಕೊಳ್ಳಬಹುದು. ಯೋಜನೆಯ ಫಲಾನುಭವಿಗಳನ್ನು ಹೆಚ್ಚಿಸುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

Trending

Exit mobile version