/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ತ್ರಿವಳಿ ತಲಾಖ್ ನಂತರ ನಿಖಾ ಹಲಾಲ್ ಮೇಲೆ ಕೇಂದ್ರದ ಕಣ್ಣು

ಮುಸ್ಲಿಮರಲ್ಲಿ ರೂಢಿಯಲ್ಲಿರುವ ನಿಖಾ ಹಲಾಲ್ ಹಾಗೂ ಪಾಲಿಗಾಮಿ ಪದ್ಧತಿಯು ಸಂವಿಧಾನಾತ್ಮಕವಲ್ಲ ಎಂದು ಆರೋಪಿಸಿ ಸುಪ್ರೀಂ ಕೋರ್ಟ್‍ನಲ್ಲಿ ಮೂರು ಅರ್ಜಿಗಳು ಸಲ್ಲಿಕೆಯಾಗಿದ್ದು, ಅದನ್ನು ಪರಿಶೀಲಿಸುವುದಾಗಿ ಸುಪ್ರೀಂ ಪೀಠವು ಒಪ್ಪಿಕೊಂಡಿದೆ. ಅರ್ಜಿಧಾರರಿಗೆ ಬೆಂಬಲ ನೀಡಲು ಕೇಂದ್ರ ಸರಕಾರವು ನಿರ್ಧರಿಸಿದೆ.

Published

on

ಸುದ್ದಿದಿನ ಡೆಸ್ಕ್: ಮುಸ್ಲಿಂ ಸಂಸ್ಕಾರದಲ್ಲಿ ಬೆರೆತುಹೋಗಿದ್ದ ತ್ರಿವಳಿ ತಲಾಖ್‍ಅನ್ನು ಸುಪ್ರೀಂ ಅಂಗಳಕ್ಕೆ ತೆಗೆದುಕೊಂಡು ಹೋಗಿ, ಅದನ್ನು ಕ್ರಿಮಿನಲ್ ಪ್ರಕರಣದಡಿ ತಂದ ಕೇಂದ್ರ ಸರಕಾರವು ಮತ್ತೊಂದು ಮಹತ್ವದ ನಿರ್ಧಾರಕ್ಕೆ ಬೆನ್ನಾಗಿ ನಿಂತಿದೆ.
ಮುಸ್ಲಿಮರಲ್ಲಿ ರೂಢಿಯಲ್ಲಿರುವ ನಿಖಾ ಹಲಾಲ್ ಹಾಗೂ ಪಾಲಿಗಾಮಿ ಪದ್ಧತಿಯು ಸಂವಿಧಾನಾತ್ಮಕವಲ್ಲ ಎಂದು ಆರೋಪಿಸಿ ಸುಪ್ರೀಂ ಕೋರ್ಟ್‍ನಲ್ಲಿ ಮೂರು ಅರ್ಜಿಗಳು ಸಲ್ಲಿಕೆಯಾಗಿದ್ದು, ಅದನ್ನು ಪರಿಶೀಲಿಸುವುದಾಗಿ ಸುಪ್ರೀಂ ಪೀಠವು ಒಪ್ಪಿಕೊಂಡಿದೆ. ಅರ್ಜಿಧಾರರಿಗೆ ಬೆಂಬಲ ನೀಡಲು ಕೇಂದ್ರ ಸರಕಾರವು ನಿರ್ಧರಿಸಿದೆ.
ನಿಖಾ ಹಲಾಲ್ ಎಂಬುದು ಮುಸ್ಲಿಮರಲ್ಲಿ ಜಾರಿಯಲ್ಲಿರುವ ಒಂದು ವಿವಾದಾತ್ಮಕ ಪದ್ಧತಿ. ಇದರ ಪ್ರಕಾರ ತ್ರಿವಳಿ ತಲಾಖ್‍ನಲ್ಲಿ ವಿಚ್ಛೇದಿತರಾಗುವ ದಂಪತಿ ಮರು ಮದುವೆಯಾಗಬೇಕಾದರೆ, ವಿಚ್ಛೇದಿತಗೊಂಡ ಮಹಿಳೆಯು ಮತ್ತೊಬ್ಬನನ್ನು ಮದುವೆಯಾಗಿ ಆತನಿಗೆ ವಿಚ್ಛೇದನ ನೀಡಬೇಕು ಅಥವಾ ಆತ ಸತ್ತ ನಂತರ ತನ್ನ ಮೊದಲ ಪತಿಯನ್ನು ಮರು ವಿವಾಹವಾಗಬಹುದು.
ಮಸ್ಲಿಂ ಮಹಿಳಾ ಕಾರ್ಯಕರ್ತೆಯರು ಈ ಪದ್ಧತಿ ವಿರುದ್ಧ ಸಿಡಿದೆದ್ದಿದ್ದು, ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ ಸುಪ್ರಿ ಕೋರ್ಟ್, ಕೇಂದ್ರ ಕಾನೂನು ಸಚಿವಾಲಯಕ್ಕೆ ನೋಟಿಸ್ ನೀಡಿತ್ತ, ತನ್ನ ನೋಟಿಸ್‍ಗೆ ಉತ್ತರಿಸುವಂತೆ ಕೇಂದ್ರಕ್ಕೆ ಸೂಚಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರವು ಅರ್ಜಿದಾರರಿಗೆ ತನ್ನ ಬೆಂಬಲ ನೀಡುವುದಾಗಿ ಹೇಳಿದೆ.

Leave a Reply

Your email address will not be published. Required fields are marked *

Trending

Exit mobile version