ದಿನದ ಸುದ್ದಿ

ಕೇಂದ್ರದ ಅಡಿಕೆ ಆಮದು ನಿರ್ಧಾರ ; ದೇಶೀಯ ಅಡಕೆ ಮಾರುಕಟ್ಟೆ ಮೇಲೆ ಯಾವುದೇ ಪ್ರತಿಕೂಲ ಪರಿಣಾಮವಿಲ್ಲ : ಸಚಿವ ಆರಗ ಜ್ಞಾನೇಂದ್ರ

Published

on

ಸುದ್ದಿದಿನ ಡೆಸ್ಕ್ : ಕೇಂದ್ರದ ಅಡಿಕೆ ಆಮದು ನಿರ್ಧಾರದಿಂದ ದೇಶೀಯ ಅಡಕೆ ಮಾರುಕಟ್ಟೆ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಉಂಟಾಗುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಪ್ರತಿಕ್ರಿಯೆ ನೀಡಿದ ಅವರು, ನಮ್ಮ ದೇಶದಿಂದ ಭೂತಾನ್ ದೇಶಕ್ಕೆ ಸಂಸ್ಕೃರಿತ ಅಡಿಕೆ ಉತ್ಪನ್ನಗಳು ಆಮದಿಗಿಂತ ಹೆಚ್ಚು ಪ್ರಮಾಣದಲ್ಲಿ ರಫ್ತಾಗುತ್ತಿದೆ. ಭೂತಾನ್‌ನಿಂದ ಕೇವಲ ಹಸಿ ಅಡಿಕೆ ಆಮದಿಗೆ ಮಾತ್ರ ಅನುಮತಿ ನೀಡಲಾಗಿದೆ ಎಂದರು.

ಅಡಿಕೆ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ಕೇಂದ್ರ ಸರ್ಕಾರದ ಜೊತೆ ಸತತ ಸಂಪರ್ಕದಲ್ಲಿದ್ದು, ಭೂತಾನ್ ಅಡಿಕೆ ಆಮದು ವಿಚಾರವಾಗಿಯೂ ಮಾತುಕತೆ ನಡೆಸಲಾಗುವುದು. ಈ ಸಂಬಂಧ ಅಡಿಕೆ ಬೆಳಗಾರರು ಅನಗತ್ಯವಾಗಿ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಈ ವಿಚಾರ ಕುರಿತು ಕೇಂದ್ರಕ್ಕೆ ಮನವರಿಕೆ ಮಾಡಿಕೊಡಲು ಸಂಸದರ ನಿಯೋಗವನ್ನು ಕೇಂದ್ರಕ್ಕೆ ಕೊಂಡೊಯ್ಯಲಾಗುವುದು ಎಂದು ಸಚಿವರು ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version