ದಿನದ ಸುದ್ದಿ
ನಾಳೆ ಮೋದಿಸರ್ಕಾರದ ಎರಡನೇ ಕೇಂದ್ರ ಬಜೆಟ್ ಮಂಡನೆ
ಸುದ್ದಿದಿನ,ದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ 2020–21ನೇ ಹಣಕಾಸು ವರ್ಷದ ಬಜೆಟ್ ಮಂಡನೆ ಮಾಡಲಿದ್ದಾರೆ. ಜನಸಾಮಾನ್ಯರು, ಉದ್ಯಮಿಗಳು, ರಿಯಲ್ ಎಸ್ಟೇಟ್ ವಹಿವಾಟುದಾರರಲ್ಲಿ ಬಜೆಟ್ ಕುತೂಹಲ ಹೆಚ್ಚಿಸಿದೆ.
ದೇಶಿ ಆರ್ಥಿಕತೆಯು 11 ವರ್ಷಗಳಲ್ಲಿಯೇ ಕನಿಷ್ಠ ಮಟ್ಟದ (ಶೇ 5) ಪ್ರಗತಿ ಸಾಧಿಸಿದೆ. ನಿರ್ಮಲಾ ಅವರು ತಮ್ಮ ಎರಡನೇ ಬಜೆಟ್‌ನಲ್ಲಿ ಯಾವ ಮಂತ್ರದಂಡ ಬಳಸಲಿದ್ದಾರೆ ಅನ್ನೋ ಕುತೂಹಲ ಇದೆ. ಆರ್ಥಿಕ ವೃದ್ಧಿ ದರ (ಜಿಡಿಪಿ), ರಫ್ತು, ಬಂಡವಾಳ ಹೂಡಿಕೆ, ಸರಕು ಮತ್ತು ಸೇವೆಗಳ ಬೇಡಿಕೆ, ವಾಹನಗಳ ಮಾರಾಟ, ಉದ್ಯೋಗ ಅವಕಾಶ ಮುಂತಾದ ವಲಯಗಳು ಕಳಪೆ ಸಾಧನೆ ಪ್ರದರ್ಶಿಸುತ್ತಿವೆ.
ಬಳಕೆ ಹೆಚ್ಚಿಸಿ ಆರ್ಥಿಕತೆಗೆ ಚೇತರಿಕೆ ನೀಡಲು ಮೂಲ ಸೌಕರ್ಯ ವಲಯದ ಬಂಡವಾಳ ಹೂಡಿಕೆಗೆ ಆಸಕ್ತಿ ತೋರಬೇಕಿದೆ. ಮತ್ತೊಂದೆಡೆ ಆದಾಯ ತೆರಿಗೆಯ ಸ್ಲಾಬ್ಗಳಲ್ಲಿ ಬದಲಾವಣೆಯನ್ನೂ ನಿರೀಕ್ಷೆ ಮಾಡಲಾಗ್ತಿದೆ. ವೈಯಕ್ತಿಕ ಆದಾಯ ತೆರಿಗೆ ಮಿತಿಯನ್ನು 5 ಲಕ್ಷಕ್ಕೆ ಮಿತಿಗೊಳಿಸುವ ನಿರೀಕ್ಷೆಗಳು ಹೆಚ್ಚಿವೆ.
ಇದಲ್ಲದೇ ಷೇರು ಹೂಡಿಕೆ ಮೇಲಿನ ತೆರಿಗೆಗಳಲ್ಲೂ ಸಡಿಲಿಕೆ ಆಗುವ ಸಾಧ್ಯತೆಗಳಿವೆ. ಕರ್ನಾಟಕಕ್ಕೆ ಕೇಂದ್ರ ಬಜೆಟ್‌ನಲ್ಲಿ ಏನೇನು ಸಿಗಬಹುದು ಅನ್ನೋ ಕುತೂಹಲ ಇದ್ದೇ ಇದೆ. ಬೆಂಗಳೂರು ಉಪನಗರ ರೈಲು ಯೋಜನೆಗೆ ಅನುದಾನ, ರೈಲ್ವೆ ಮಾರ್ಗಗಳು, ಹೊಸ ರೈಲುಗಳು ಹೀಗೆ ನಾನಾ ನಿರೀಕ್ಷೆಗಳನ್ನು ಕರ್ನಾಟಕದ ಜನರು ಇಟ್ಟುಕೊಂಡಿದ್ದಾರೆ.
ಲೋಕ ಸಭೆಯ ಈ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ, ನಾಳೆ ಬಜೆಟ್ ಮಂಡನೆಯ ನೇರ ಪ್ರಸಾರ ವೀಕ್ಷಿಸಿ
ಪ್ರಮುಖ ಅಂಶಗಳು
- ನಾಳೆ ಕೇಂದ್ರ ಸರ್ಕಾರದ ಬಜೆಟ್ 2020 ಮಂಡನೆ.
- ಮೋದಿ ಸರ್ಕಾರದ 2ನೇ ಅವಧಿಯ ಮೊದಲ ಪೂರ್ಣಪ್ರಮಾಣದ ಬಜೆಟ್.
- ಬಜೆಟ್ ಮಂಡನೆ ಮಾಡಲಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ನಾಳೆ ಬೆಳಗ್ಗೆ 11 ಗಂಟೆಗೆ ಮುಂಗಡ ಪತ್ರ ಓದಲು ಆರಂಭ. - 2ನೇ ಬಜೆಟ್ ಮಂಡನೆ ಮಾಡಲಿರುವ ನಿರ್ಮಲಾ ಸೀತಾರಾಮನ್.
- ಇಂದು ಕೃಷ್ಣಮೂರ್ತಿ ಸುಬ್ರಮಣಿಯನ್ ದೇಶದ ಆರ್ಥಿಕ ಸಮೀಕ್ಷೆ ಪ್ರಕಟ.
- ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್.
- ಕೇಂದ್ರ ಬಜೆಟ್ ಎಂದರೆ ಆಯವ್ಯಯ ಪತ್ರ ಅಥವಾ ಮುಂಗಡ ಪತ್ರ.
- 2020 ಏಪ್ರಿಲ್ 1ರಿಂದ 2021 ಮಾರ್ಚ್ 31ರ ಅವಧಿಯವರೆಗಿನ ಬಜೆಟ್.
- ಸರ್ಕಾರದ ಎಲ್ಲಾ ಆದಾಯಮೂಲಗಳಿಂದ ಬರುವ ಆದಾಯಗಳ ವಿವರ.
- 5 ಲಕ್ಷದವರೆಗೆ ಆದಾಯ ಹೊಂದಿರುವವರನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿರಿಸಲು ಚಿಂತನೆ.
- ಬಜೆಟ್ನಿಂದ ದೇಶದ ಕೃಷಿ ಕ್ಷೇತ್ರದಲ್ಲಿ ಹೆಚ್ಚಾದ ನಿರೀಕ್ಷೆಗಳು.
ಸುದ್ದಿದಿನ.ಕಾಂ|ವಾಟ್ಸಾಪ್|9980346243