ದಿನದ ಸುದ್ದಿ
ಆಮದು ಜವಳಿ ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಿಸಲು ಕೇಂದ್ರ ನಿರ್ಧಾರ
ಸುದ್ದಿದಿನ ಡೆಸ್ಕ್ | ಸ್ವದೇಶಿ ಉತ್ಪನ್ನಗಳನ್ನು ಪ್ರೋತ್ಸಾಹಿಸಲು ಆಮದು ಮಾಡಿಕೊಳ್ಳುವ ಜವಳಿ ಉತ್ಪನ್ನಗಳ ಮೇಲಿನ ಸುಂಕವನ್ನು ಕೇಂದ್ರ ಸರ್ಕಾರ ದುಪ್ಪಟ್ಟುಗೊಳಿಸಲು ನಿರ್ಧರಿಸಿದ್ದು, ಜಾಕೆಟ್, ಸೂಟ್, ಕಾರ್ಪೆಟ್ ನಂತಹ ಆಮದು ಉತ್ಪನಗಳ ಮೇಲಿನ ತೆರಿಗೆ ಶೇ. 20ರ ವರೆಗೆ ಹೆಚ್ಚಿಸಲಿದೆ. ಸೆಂಟ್ರಲ್ ಬೋರ್ಡ್ ಆಫ್ ಇನ್ಡೈರೆಕ್ಟ್ ಟ್ಯಾಕ್ಸ್ ಆ್ಯಂಡ್ ಕಸ್ಟಮ್ಸ್ ಕೆಲವು ವಸ್ತುಗಳ ಮೇಲೆ ಸುಂಕ ಹೆಚ್ಚಿಸಲು ನಿರ್ಧರಿಸಿದೆ.
ಆಮದು ಮಾಡಿಕೊಳ್ಳುವ ಫ್ಯಾಬ್ರಿಕ್, ಡ್ರೆಸ್ಸೆಸ್, ಟ್ರಸರ್ಸ್, ಸೂಟ್ಸ್, ಬೇಬಿ ಗಾರ್ಮೆಂಟ್ಸ್ ಗಳ ಮೇಲೆ ಹೊಸ ತೆರಿಗೆ ಬೀಳಲಿದೆ. ಸ್ವದೇಸಿ ವಸ್ತುಗಳ ಪ್ರೋತ್ಸಾಹಿಸಲು ಈ ನಿರ್ಧಾರ ತೆಗೆದುಕೊಂಡಿದ್ದು, ಬಾಂಗ್ಲಾದೇಶ ಸೇರಿದಂತೆ ಅಭಿವೃದ್ಧಿ ಹೊಂದದ ದೇಶಗಳಿಗೆ ತೆರಿಗೆ ಮುಕ್ತಗೊಂಡಿವೆ ಎಂದು ಎಫ್ಐಇಒ ಡೈರೆಕ್ಟರ್ ಜನರಲ್ ಅಜಯ್ ಸಹಾಯ್ ತಿಳಿಸಿದ್ದಾರೆ.
ವಿಶ್ವ ವ್ಯಾಪಾರ ಒಕ್ಕೂಟದ ನಿಯಮದಂತೆ ಭಾರತವು ಜವಳಿ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡಲು ಸಾಧ್ಯವಿಲ್ಲ. ಆದ್ದರಿಂದ ಸರ್ಕಾರವು ಸ್ವದೇಶಿ ಉತ್ಪನ್ನಗಳ ಉತ್ತೇಜನ ನೀಡಲು ಆಮದು ವಸ್ತುಗಳ ಮೇಲೆ ತೆರಿಗೆ ಹೆಚ್ಚಿಸಲು ತೀರ್ಮಾನಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401