ದಿನದ ಸುದ್ದಿ
ದೇಶದ ಬಡವರು ಮತ್ತು ದುರ್ಬಲ ವರ್ಗಗಳ ಅಗತ್ಯಗಳನ್ನು ಪೂರೈಸಲು ಕೇಂದ್ರ ಸರ್ಕಾರ ಬದ್ಧ : ಪ್ರಧಾನಿ ಮೋದಿ
ಸುದ್ದಿದಿನ ಡೆಸ್ಕ್ : ದೇಶದ ಬಡವರು ಮತ್ತು ದುರ್ಬಲ ವರ್ಗಗಳ ಅಗತ್ಯಗಳನ್ನು ಪೂರೈಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಹೊಸ ಪೀಳಿಗೆಯ ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಈ ಎಲ್ಲ ವರ್ಗಗಳ ಜನರ ಆಕಾಂಕ್ಷೆಗಳನ್ನು ಈಡೇರಿಸಲಾಗುವುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.
ವಿಕೋಪ ನಿರ್ವಹಣೆ ಮೂಲಸೌಕರ್ಯಗಳ ನಾಲ್ಕನೇ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ನೀಡಿದ ವಿಡಿಯೋ ಸಂದೇಶದಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ.
ಮೂಲಸೌಕರ್ಯ ಅಭಿವೃದ್ಧಿಯ ಯಶೋಗಾಥೆಯಲ್ಲಿ ದೇಶದ ಜನತೆ ಹೃದಯ ಭಾಗದಲ್ಲಿ ಇರಲಿದ್ದಾರೆ. ಮೂಲಸೌಕರ್ಯಗಳ ಮೂಲಕ ಜನರಿಗೆ ಅತ್ಯುನ್ನತ ಗುಣಮಟ್ಟದ, ಸುಸ್ಥಿರ ಜೀವನ ಸೇವೆಗಳನ್ನು ಸಮಾನವಾಗಿ ಒದಗಿಸಲಾಗುವುದು ಎಂದರು.
ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ವಿದ್ಯುಚ್ಛಕ್ತಿ ಮತ್ತು ಸಾರಿಗೆ ವಲಯದ ಮೂಲಭೂತ ಸೇವೆಗಳನ್ನು ಹೆಚ್ಚಿಸುವ ಜೊತೆಗೆ, ಹವಾಮಾನ ಬದಲಾವಣೆಯನ್ನು ನೇರವಾಗಿ ಹತ್ತಿಕ್ಕಲು ಭಾರತ ಕಾರ್ಯೋನ್ಮುಖವಾಗಿದೆ. ಅಭಿವೃದ್ಧಿ ಪ್ರಯತ್ನಗಳ ಜೊತೆಗೆ ಇಂಗಾಲ ಹೊರಸೂಸುವಿಕೆಯನ್ನು ಶೂನ್ಯ ಪ್ರಮಾಣಕ್ಕೆ ತಗ್ಗಿಸಲು ಭಾರತ ಬದ್ಧವಾಗಿದೆ ಎಂದು ಗ್ಲಾಸ್ಗೊ ಸಮಾವೇಶದಲ್ಲೇ ದೃಢಪಡಿಸಲಾಗಿದೆ ಎಂದು ಪ್ರಧಾನಿ ತಿಳಿಸಿದರು.
ಕೇವಲ ಎರಡೂವರೆ ವರ್ಷಗಳ ಅವಧಿಯಲ್ಲಿ ವಿಕೋಪ ನಿರ್ವಹಣೆಯ ಮೂಲಸೌಕರ್ಯಗಳ ಮೈತ್ರಿಕೂಟವು ಕೆಲವೊಂದು ಮಹತ್ವದ ಉಪಕ್ರಮಗಳನ್ನು ಕೈಗೊಂಡಿದೆ. ದ್ವೀಪ ರಾಷ್ಟ್ರಗಳಲ್ಲಿ ವಿಕೋಪ ನಿರ್ವಹಣೆಯ ಮೂಲಸೌಕರ್ಯ ಉಪಕ್ರಮವು ಅತ್ಯುತ್ತಮವಾಗಿ ಕೆಲಸ ಮಾಡಿದ್ದು, ಇದು ಭಾರತದ ಬದ್ಧತೆಯನ್ನು ಪ್ರದರ್ಶಿಸುತ್ತಿದೆ ಎಂದು ಪ್ರಧಾನಿ ತಿಳಿಸಿದರು.
My remarks at International Conference on Disaster Resilient Infrastructure. https://t.co/gZyZ7yfVrE
— Narendra Modi (@narendramodi) May 4, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243