ದಿನದ ಸುದ್ದಿ
ಸರ್ಕಾರಿ ನೌಕರರಿಗೆ ಕೇಂದ್ರದಿಂದ ಬಿಗ್ ಶಾಕ್..!
ಸುದ್ದಿದಿನ,ದೆಹಲಿ :ವಿವಿಧ ಸರ್ಕಾರಿ ಇಲಾಖೆಗಳಲ್ಲಿ 30 ವರ್ಷಗಳ ಸೇವೆ ಪೂರ್ಣಗೊಳಿಸಿರುವ ಎಲ್ಲಾ ಉದ್ಯೋಗಿಗಳ ಸೇವಾ ದಾಖಲೆ ಪರಿಶೀಲಿಸುವ ಮೂಲಕ ದಕ್ಷ ಮತ್ತು ಭ್ರಷ್ಟ ಉದ್ಯೋಗಿಗಳನ್ನು ಪತ್ತೆ ಹಚ್ಚಿ, ಅವಧಿ ಪೂರ್ವ ನಿವೃತ್ತಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.
ಉದ್ಯೋಗಿಗಳ ಸೇವಾ ದಾಖಲೆ ಪರಿಶೀಲಿಸಲು ತನ್ನ ಎಲ್ಲಾ ಇಲಾಖೆಗಳಿಗೆ ಸರ್ಕಾರ ಆದೇಶ ಹೊರಡಿಸಿದೆ. ಕೇಂದ್ರ ನಾಗರಿಕ ಸೇವೆಗಳ (ಪಿಂಚಣಿ) ನಿಯಮಗಳು,1972ರ ಅನ್ವಯ ಉದ್ಯೋಗಿಗಳ ಕಾರ್ಯಕ್ಷಮತೆ ಪರಿಶೀಲನೆ ನಡೆಸುವಂತೆ ಸೂಚಿಸಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243