ರಾಜಕೀಯ
ಕಾಂಗ್ರೆಸ್ ವಿರುದ್ಧ ಮುಸ್ಲಿಂ ಮಹಿಳೆಯರು ದನಿ ಎತ್ತಲಿ: ಅನಂತ್ ಕುಮಾರ್
ಸುದ್ದಿದಿನ ಡೆಸ್ಕ್: ಮುಸ್ಲಿಂ ಮಹಿಳೆಯರ ಹಿತರಕ್ಷಣೆಗೆ ತಂದಿರುವ ಮಹತ್ವಪೂರ್ಣ ತ್ರಿವಳಿ ತಲಾಖ್ ಮಸೂದೆಗೆ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳು ವಿನಾಕಾರಣ ತಡೆಯೊಡ್ಡುತ್ತಿವೆ. ಆದ್ದರಿಂದ ಅವರ ವಿರುದ್ಧ ದೇಶದಾದ್ಯಂತ ಮುಸ್ಲಿಂ ಸಹೋದರಿಯರು, ಮಹಿಳಾ ಸಂಘಟನೆಗಳು ಹೋರಾಟ ಕೈಗೊಳ್ಳಬೇಕಾಗಿದೆ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೇಳಿದರು.
ದೆಹಲಿಯಲ್ಲಿ ಮಾತನಾಡಿದ ಅವರು, ತ್ರಿವಳಿ ತಲಾಖ್ ಬಗ್ಗೆ ನಿಮ್ಮ ಅಡಚಣೆಗೆ ಕಾರಣಗಳೇನು ಎಂಬುದನ್ನು ಕಾಂಗ್ರೆಸ್ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.