ದಿನದ ಸುದ್ದಿ
ಗ್ರಾಮ್ಸ್ ಸಂಪನ್ಮೂಲ ಸಂಸ್ಥೆ: ಸಿಇಒ ಹುದ್ದೆಗೆ ಅರ್ಜಿ ಆಹ್ವಾನ
ಸುದ್ದಿದಿನ,ರಾಯಚೂರು : ಜಿಲ್ಲಾ ಮೀನುಗಾರಿಕೆ ಇಲಾಖೆಯ ಹಾಗೂ ಲಿಂಗಸೂಗೂರಿನ ಗ್ರಾಮ್ಸ್ ಸಂಪನ್ಮೂಲ ಸಂಸ್ಥೆಯ ಸಹಯೋಗದಲ್ಲಿ ಜಿಲ್ಲೆಯಲ್ಲಿ ರಚನೆಯಾದಂತಹ ಅಂಬಿಗರ ಚೌಡಯ್ಯ ಮತ್ತು ಮಾನವಿ ತಾಲೂಕಿನ ಜಲ ಕ್ರಾಂತಿ ಮೀನು ಉತ್ಪಾದಕರ ಕಂಪನಿಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ 2 ಹುದ್ದೆಗಳು ಖಾಲಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಆಸಕ್ತರು BFSC, B.Sc Agriculture, B.Sc Horticulture, BBM, Diploma Agriculture, Any Gruduates 2ವರ್ಷ ಸಂಬಂಧಿಸಿದ ಕ್ಷೇತ್ರದಲ್ಲಿ ಅನುಭವ ಹೊಂದಿದವರಿಗೆ ಮೊದಲ ಆಧ್ಯತೆ ನೀಡಲಾಗುವುದು.
ಸಂದರ್ಶನವನ್ನು ಇದೇ ಏ.29ರ ಬೆಳಿಗ್ಗೆ 10.30ಗಂಟೆಗೆ ಇದ್ದು, ಅಭ್ಯರ್ಥಿಗಳು ಬರುವಾಗ ಅಗತ್ಯ ದಾಖಲೆಗಳ ಝರಾಕ್ಸ್ ಪ್ರತಿಗಳನ್ನು ತೆಗೆದುಕೊಂಡು ಬರತಕ್ಕದ್ದು.
ಸಂದರ್ಶನದ ವಿಳಾಸ
ಅಂಬಿಗರ ಚೌಡಯ್ಯ ಮೀನು ಉತ್ಪಾದಕರ ಕಂಪನಿ ಲಿಮಿಟೆಡ್, ಟ್ಯಾಂಕ್ ಬಂಡ್ ರೋಡ್, ಗೋಲ್ ಮಾರ್ಕೇಟ್ ಹತ್ತಿರ, ಮಾರೆಮ್ಮ ದೇವಸ್ಥಾನ ರಾಯಚೂರು, ದೂರವಾಣಿ ಸಂಖ್ಯೆ: 7022914194ಗೆ ಸಂಪರ್ಕಿಸುವಂತೆ ಸಂಸ್ಥೆಯ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243