ದಿನದ ಸುದ್ದಿ

ಡಿ ಬಾಸ್ ಕರೆದ ಕೂಡಲೇ ಓಡೋಡಿ ಬಂತು ಹುಲಿ

Published

on

ಸುದ್ದಿದಿನ ಡೆಸ್ಕ್: ಹುಲಿ ದಿನಾಚರಣೆ ಅಂಗವಾಗಿ ನಟ ದರ್ಶನ್ ಅವರು ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿದ್ದಾಗ ಥೇಟ್ ಸಿನಿಮೀಯ ಘಟನೆಯೊಂದು ನಡೆಯಿತು.

ಡಿ ಬಾಸ್ ಅವರು ಹುಲಿ ಬೋನಿನ ಬಳಿ ಹೋಗಿ ವಿನೀಶ್ ಎಂದು ಕೂಗಿದ ಕೂಡಲೇ ಮಲಗಿದ್ದ ಹುಲಿ ಓಡೋಡಿ ಬಂದು ದರ್ಶನ್ ಅವರ ಮುಖದತ್ತ ಯೆಸ್ ಬಾಸ್ ಎನ್ನುವಂತೆ ವಿನಮ್ರವಾಗಿ ನಿಂತುಕೊಂಡಿತು.
ಈ ಹುಲಿಯನ್ನು ಚಾಲೆಂಜಿಂಗ್ ಸ್ಟಾರ್ ಅವರು ಆರು ವರ್ಷಗಳಿಂದ ದತ್ತು ಪಡೆಯುತ್ತಿದ್ದಾರೆ. ಆಗಾಗ್ಗೆ ಬಂದು ಮೃಗಾಲಯದಲ್ಲಿ ಒಂದಿಷ್ಟು ಸಮಯ ಕಳೆಯುತ್ತಾರೆ. ಈ ಹುಲಿಗೆ ತಮ್ಮ ಪುತ್ರನ ಹೆಸರನ್ನೆ ಇಟ್ಟಿದ್ದಾರೆ. ಇದೇ ವೇಳೆ 2.75 ಲಕ್ಷ ಪಾವತಿಸಿ ಹುಲಿ ಮತ್ತು ಮಾದೇಶ ಹೆಸರಿನ ಆನೆಯನ್ನು ಮತ್ತೊಂದು ವರ್ಷದ ಅವಧಿಗೆ ದತ್ತು ಪಡೆದರು.
Web title: challenging star darshan celebrate world tiger day

Leave a Reply

Your email address will not be published. Required fields are marked *

Trending

Exit mobile version