ದಿನದ ಸುದ್ದಿ

ಚಾಮರಾಜನಗರ ಆಕ್ಸಿಜನ್ ದುರಂತ | ಡಿಸಿ ರೋಹಿಣಿ‌ ಸಿಂಧೂರಿಗೆ ಹೈಕೋರ್ಟ್ ಕ್ಲೀನ್ ಚಿಟ್ : ವರದಿಯಲ್ಲೇನಿದೆ..?

Published

on

ಸುದ್ದಿದಿನ,ಚಾಮರಾಜನಗರ: ಕೆಲವು ದಿನಗಳ‌ ಹಿಂದೆ ಜಿಲ್ಲೆಯಲ್ಲಿ ನಡೆದಿದ್ದ ಆಕ್ಸಿಜನ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಕ್ಲೀನ್ ಚಿಟ್ ದೊರಕಿದೆ.

ಆಕ್ಸಿಜನ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಎ.ಎನ್ ವೇಣುಗೋಪಾಲ ಸಮಿತಿಯು ಹೈಕೋರ್ಟ್ ಗೆ ವರದಿಯನ್ನು ನೀಡಿದ್ದು, ವರದಿಯಲ್ಲಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ‌ ಸಿಂಧೂರಿ ಅವರದ್ದು ಈ ಪ್ರಕರಣದಲ್ಲಿ ಯಾವುದೇ ತಪ್ಪಿಲ್ಲ ಎಂದು ತಿಳಿಸಿದೆ.

ವರದಿಯಲ್ಲಿ ಇರೋದೇನು..?

ಆಕ್ಸಿಜನ್ ದುರಂತದಲ್ಲಿ ಮೈಸೂರು ಜಿಲ್ಲಾಧಿಕಾರಿ ಅವರದ್ದು ಯಾವುದೆದ ತಪ್ಪಿಲ್ಲ. ಮೈಸೂರು ಜಿಲ್ಲಾಧಿಕಾರಿ ವಿರುದ್ಧ ಯಾವುದೇ ಸಾಕ್ಷ್ಯಗಳು ಕೂಡ ಇಲ್ಲ. ಆಕ್ಸಿಜನ್ ಪೂರೈಕೆಗೆ ತಡೆ ಒಡ್ಡಿದ್ದಾರೆ ಎಂಬ ಬಗ್ಗೆ ಯಾವ ಸಾಕ್ಷ್ಯಗಳು ಇಲ್ಲ.

ಇದನ್ನೂ ಓದಿ | ದಾವಣಗೆರೆ | ಪ್ರಾಧ್ಯಾಪಕ ಡಾ. ಪ್ರಕಾಶ್ ಹಲಗೇರಿ ಕೊರೋನಾದಿಂದ ಸಾವು

ಈ ಪ್ರಕರಣಕ್ಕೆ ಚಾಮರಾಜನಗರ ಜಿಲ್ಲಾಧಿಕಾರಿ ಹೊಣೆಯಾಗಿದ್ದು, ಆಕ್ಸಿಜನ್ ವ್ಯವಸ್ಥೆ ಮಾಡಿಕೊಳ್ಳುವಲ್ಲಿ ಜಿಲ್ಲಾಡಳಿತ, ಜಿಲ್ಲಾಸ್ಪತ್ರೆ ಸಂಪೂರ್ಣ ವಿಫಲವಾಗಿದೆ. ಜಿಲ್ಲಾಡಳಿತ, ಜಿಲ್ಲಾಸ್ಪತ್ರೆ ಎಚ್ಚರವಾಗಿದ್ದರೆ ಈ ದುರಂತ ಸಂಭವಿಸುತ್ತಿರಲಿಲ್ಲ. ಆಕ್ಸಿಜನ್ ಪ್ಲಾಂಟ್ ಚಾಮರಾಜನಗರದಿಂದ ಸುಮಾರು 70 ಕಿಲೋ ಮೀಟರ್ ದೂರದಲ್ಲಿದ್ದು, ಮೈಸೂರಿನಿಂದ ಆಕ್ಸಿಜನ್ ತುಂಬಿಸಿಕೊಂಡು ಜಿಲ್ಲಾಸ್ಪತ್ರೆಗೆ ಸಾಗಾಟ ಮಾಡಬೇಕಿತ್ತು. ಆದರೆ ಜಿಲ್ಲಾಸ್ಪತ್ರೆ, ಜಿಲ್ಲಾಡಳಿತ ಮೊದಲೇ ಎಚ್ಚೆತ್ತುಕೊಂಡಿಲ್ಲ, ಎಚ್ಚೆತ್ತುಕೊಂಡಿದ್ದರೆ ಈ ದುರಂತ ಆಗುತ್ತಿರಲಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಅಷ್ಟೇ ಅಲ್ಲದೆ ಸೋಂಕಿತರಿಗೆ ಸರಿಯಾದ ಸಮಯಕ್ಕೆ ಆಕ್ಸಿಜನ್ ದೊರಕಿರಲಿಲ್ಲ. ಹೀಗಾಗಿ ಸೋಂಕಿತರ ಮೆದುಳು, ದೇಹದ ಇತರೆ ಭಾಗಗಳಿಗೆ ಹಾನಿಯುಂಟಾಗಿದೆ. ಆಕ್ಸಿಜನ್ ಕೊರತೆಯಿಂದ ಮೆದುಳು, ದೇಹದ ಇತರೆ ಭಾಗಗಳಿಗೆ ಹಾನಿಯಾಗಿ ಸಾವನ್ನಪ್ಪಿದ್ದಾರೆ ಎಂದು ಹೈಕೋರ್ಟಿಗೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ರೋಹಿಣಿ ಸಿಂಧೂರಿಗೆ ಕ್ಲೀನ್‌ಚಿಟ್ ದೊರೆತಿದೆ.

ಆರೋಗ್ಯ ಸಚಿವ ಸುಧಾಕರ್ ಹೇಳಿದ್ದೇನು..?

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ದುರಂತಕ್ಕೆ ಆಕ್ಸಿಜನ್ ಕೊರತೆಯು ಕಾರಣವಾಗಿದೆ. ಮೇ 2ರ ರಾತ್ರಿ 11ರಿಂದ ಮೇ 3ರ ಬೆಳಗ್ಗಿನ ಜಾವದವರೆಗೆ ಆಕ್ಸಿಜನ್ ಇರಲಿಲ್ಲ. ಜಿಲ್ಲಾಸ್ಪತ್ರೆಯ ದಾಖಲೆಯ ಪ್ರಕಾರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಇರಲಿಲ್ಲ. ಇತ್ತ ಮೂವರಷ್ಟೇ ಆಕ್ಸಿಜನ್ ಇಲ್ಲದೇ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದರು. ಆದರೆ 36 ಮಂದಿ ಸಾವಿಗೂ ಆಕ್ಸಿಜನ್ ಕೊರತೆ ಕಾರಣ ಎನ್ನಲಾಗಿದೆ.

ಮೈಸೂರು ಡಿಸಿ ವಿರುದ್ಧ ಚಾಮರಾಜನಗರ ಡಿಸಿ ರವಿ ಆರೋಪ ಮಾಡಿದ್ದರು. ಆದರೆ ತನಿಖೆ ವೇಳೆ ಮೈಸೂರು ಡಿಸಿ ವಿರುದ್ಧದ ಆರೋಪಕ್ಕೆ ಸಾಕ್ಷ್ಯಗಳೇ ಇಲ್ಲ. ಈ ಹಿನ್ನೆಲೆಯಲ್ಲಿ ಚಾಮರಾಜನಗರ ಡಿಸಿ ರವಿ ವಿರುದ್ಧ ಏನ್ ಕ್ರಮಕೈಗೊಳ್ಳುತ್ತೆ ಸರ್ಕಾರ..?, ಚಾಮರಾಜನಗರ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಏನ್ ಉತ್ತರ ಕೊಡ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version