ಲೈಫ್ ಸ್ಟೈಲ್
ಸರ್ವಮಂಗಳೆ ಚಾಮುಂಡೇಶ್ವರಿಯ ದರುಶನಕ್ಕಾಗಿ ಸಾಲುಗಟ್ಟಿ ನಿಂತ ಭಕ್ತರು. ಈ ದೇವಾಲಯದ ವಿಶೇಷ ಏನು?
ಆಷಾಢ ಮಾಸದ ಶುಕ್ರವಾರ ದಂದು, ಶ್ರೀರಂಗಪಟ್ಟಣದ ತಾಯಿ ಚಾಮುಂಡೇಶ್ವರಿಯ ನೋಡಲು ಜನ ತಾ ಮುಂದು ನಾ ಮುಂದು ಎಂಬಂತೆ ಸಾಲು ಗಟ್ಟಿ ನಿಂತಿದ್ದಾರೆ. ಕರುನಾಡ ತಾಯಿ ಚಾಮುಂಡೇಶ್ವರಿಯ ವಿಶೇಷ ಅಲಂಕಾರ ಜನರನ್ನು ಮೂಕವಿಸ್ಮಿತನಾಗಿಸಿದೆ. ಸುಮಾರು ಹಂತಕ್ಕೂ ಹೆಚ್ಚು ಜನ ಇಡೀ ರಾತ್ರಿ ಈ ವಿಶಿಷ್ಟ ಅಲಂಕಾರ ಸೇವೆಯಲ್ಲಿ ಭಾಗಿಯಾಗಿದ್ದಾರೆ.
ಸುಮಾರು ಇಪ್ಪತ್ತು ನಾಲ್ಕು ಬಗೆಯ, ಹದಿನಾರು ಸಾವಿರ ತಿನಿಸುಗಳನ್ನು ಬಳಸಿ, ಈ ಅಲಂಕಾರವನ್ನು ಸಂಪೂರ್ಣ ಗೊಳಿಸಲಾಗಿದೆ. ತಾಯಿಯ ಮೂಲ ಮೂರುತಿ, ಗರ್ಭಗುಡಿ ಸೇರಿದಂತೆ ಇಡೀ ದೇವಾಲಯವನ್ನು ವಿಧವಿಧವಾದ ಚಕ್ಕುಲಿ-ಕೊಡುಬಲೆ-ರವೆ ಉಂಡೆ-ಅಂಚಿನ ಉಂಡೆ-ಚೌಚೌ-ಬಗೆ ಬಗೆಯ ತಿನಿಸುಗಳಿಂದ ಅಲಂಕರಿಸಲಾಗಿದೆ. ಸರ್ವಮಂಗಳೆಯ ಈ ಅಲಂಕಾರ ನೋಡಲು ಎರಡು ಕಣ್ಣು ಗಳು ಸಾಲದು ಎಂಬಂತೆ ತಾಯಿಯ ಮುಖದ ಮಂದಹಾಸ.
ಅಂದಹಾಗೆ ಇವೆಲ್ಲವೂ ನಡೆಯುತ್ತಿರುವುದು ಶ್ರೀರಂಗಪಟ್ಟಣ ದ ಚಾಮುಂಡೇಶ್ವರಿಯ ದೇವಾಲಯದಲ್ಲಿ. ಬಹಳ ಪುರಾತನ ಕಾಲದ ದೇವಾಲಯವಾಗಿದ್ದು, ಕಾರಣಾಂತರಗಳಿಂದ ಬಹಳ ವರ್ಷಗಳಿಂದಲೂ ಮುಚ್ಚಲ್ಪಟ್ಟಿದ್ದು..ಸುಮಾರು ಹದಿನಾರು ವರ್ಷಗಳಿಂದ ಈಚೆಗೆ ಈ ದೇವಾಲಯದ ಜೀರ್ಣೋದ್ಧಾರ ಕಾರ್ಯನಡೆದಿದೆ. ಇದಕ್ಕೆಲ್ಲಾ ಮೂಲ ಕಾರಣ ಇಲ್ಲಿನ ಪ್ರಧಾನ ಅರ್ಚಕರಾದ ಲಕ್ಷ್ಮೀಷ ರವರು. ಹಲವಾರು ವರ್ಷಗಳಿಂದ ದೇವಾಲಯದಲ್ಲಿ ಪೂಜೆ ಸಲಿಸುುುತ್ತಾ ತಾಯಿಯ ಆರಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಮ್ಮನವರಿಗೆ ಸಾವಿರಕ್ಕೂ ಹೆಚ್ಚಿನ ಅಲಂಕಾರಗಳನ್ನು ಮಾಡಿರುವ ಖ್ಯಾತಿ ಇವರಿಗೆ ಸಲ್ಲುತ್ತದೆ. ಅರಿಶಿಣ-ಕುಂಕುಮದ ತಾಯಿಯ ಅಭಿಷೇಕ ವಂತೂ ಅಮ್ಮನವರ ಮೂರುತಿ ಗೆ ವಿಶೇಷ ಆಕರ್ಷಣೆ ತಂದುಕೊಟ್ಟಿದೆ . ಚಾಮುಂಡೇಶ್ವರಿ ತಾಯಿಯೇ ಖುದ್ದು ಬಂದು ಕುಳಿತಂತೆ ಭಾಸವಾಗುವುದು.
ಆಶಾಢ ಶುಕ್ರವಾರ ವಾದ ಇಂದು ಜಗನ್ಮಾತೆಯ ದರುಶನಕ್ಕೆಂದು ಲಕ್ಷಾಂತರ ಜನರು ಕಾದು ಕುಳಿತ್ತಿದ್ದಾರೆ. ಚಿತ್ರರಂಗದ ಹಲವು ನಟ-ನಟಿಯರು, ಪ್ರಮುಖರು ಸೇರಿದಂತೆ ಹಲವಾರು ಗಣ್ಯರು ದೇವಸ್ಥಾನಕ್ಕೆ ಭೇಟಿ ನೀಡಿ ತಾಯಿ ಕೃಪೆಗೆ ಪಾತ್ರರಾಗಿದ್ದಾರೆ.ತಾಯಿ ಚಾಮುಂಡೇಶ್ವರಿ ಸರ್ವರಿಗೂ ಸತ್ಬುದ್ಧಿ ನೀಡಿ ಸನ್ಮಂಗಳವನ್ನು ಉಂಟು ಮಾಡಲಿ ಎಂದು ಕೋರಿಕೊಳ್ಳೋಣ.