ದಿನದ ಸುದ್ದಿ
ಚನ್ನಗಿರಿ ತುಮ್ ಕೋಸ್ | ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ಸುದ್ದಿದಿನ ಡೆಸ್ಕ್ |ಚನ್ನಗಿರಿಯ ತೋಟ ಉತ್ಪನ್ನಗಳ ಮಾರಾಟ ಸಹಕಾರ ಸಂಘದಲ್ಲಿ ಖಾಲಿ ಇರುವ ವಿವಿಧ 25 ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಇಚ್ಛೆಯುಳ್ಳ ಅಭ್ಯರ್ಥಿಗಳು ಸಂಘಕ್ಕೆ ಖುದ್ದಾಗಿ/ಅಂಚೆ/ಕೋರಿಯರ್ ಮೂಲಕ ಕಳುಹಿಸಲು ಅವಕಾಶವಿರುತ್ತದೆ.
ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 10.09.2018 ರ ಸಂಜೆ 5-00 ಗಂಟೆಯವರೆಗೆ ಇರುತ್ತದೆ. ಪ್ರಕಟಣೆ ಮತ್ತು ಅರ್ಜಿಯನ್ನು ಸಂಘದ ಅಧಿಕೃತ ವೆಬ್‍ಸೈಟ್ www.tumcos.com ಮೂಲಕ ಡೌನ್‍ಲೋಡ್ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಈ ಸಹಾಯವಾಣಿ ಸಂಖ್ಯೆ : 9742263456, 9742263457, 9738234576, 9740564945 ಗಳಿಗೆ ಬೆಳಿಗ್ಗೆ 10.30 ರಿಂದ ಸಂಜೆ 5.30ರ ವರೆಗೆ ಕರೆ ಮಾಡಬಹುದು.
ಹುದ್ದೆಯ ಹೆಸರು ಒಟ್ಟುಹುದ್ದೆಗಳು
ಆಂತರಿಕ ಲೆಕ್ಕ ಪರಿಶೋಧಕರು – 03
ದ್ವಿತೀಯ ದರ್ಜೆ ಸಹಾಯಕರು -20
ಸಿವಿಲ್ ಇಂಜಿನಿಯರ್- 01
ಸೆಕ್ಯುರಿಟಿ ಮ್ಯಾನೇಜರ್- 01
ವಿದ್ಯಾರ್ಹತೆ, ವಯೋಮಿತಿ, ಆಯ್ಕೆ ವಿಧಾನ, ಅರ್ಜಿ ಶುಲ್ಕ ಮತ್ತಿತರ ವಿವರಗಳಿಗಾಗಿ ವೆಬ್‌ಸೈಟ್‌ಗೆ ಭೇಟಿ ಕೊಡಿ.
ಸುದ್ದಿದಿನ.ಕಾಂ|ವಾಟ್ಸಾಪ್|9986715401