ಸಿನಿ ಸುದ್ದಿ
ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಮದುವೆ ಕನ್ಫರ್ಮ್ ಆಯ್ತು..!
ಸುದ್ದಿದಿನ ಡೆಸ್ಕ್ | ಬಿಗ್ ಬಾಸ್ ಸೀಸನ್ 5 ರಲ್ಲಿ ತಮ್ಮ ವಿಶಿಷ್ಟ ಪ್ರಿತಿಭೆ ಮೂಲಕ ಜನಮಾಸದಲ್ಲಿ ನೆಲೆಯೂರಿರುವ ಗಾಯಕ ಚಂದನ್ ಶೆಟ್ಟಿ ಹಾಗೂ ಕಂಗ್ಲೀಶ್ ನಿವೇದಿತಾ ಗೌಡ ಅವರು ಮದುವೆ ಆಗುವುದಾಗಿ ಸ್ಪಷ್ಟ ಪಡಿಸಿದ್ದಾರೆ.
ಚಂದನ್ ಶೆಟ್ಟಿ ತಮ್ಮ ಫೇಸ್‌ಬುಕ್, ಟ್ವಿಟರ್ ಹಾಗೂ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ನಿವೇದಿತಾ ಜೊತೆಗಿರುವ ಫೋಟೋಗಳನ್ನು ಅಪ್ಲೋಡ್ ಮಾಡುವುದರ ಮೂಲಕ ನಿವೇದಿತಾರೊಂದಿಗಿನ ಪ್ರೀತಿಯನ್ನ ಹಂಚಿಕೊಂಡಿದ್ದರು. ಇವರ ಈ ಪೋಸ್ಟ್ ಗಳಿಗೆ ಅಭಿಮಾನಿಗಳು ನಿಮ್ಮಿಬ್ಬರ ಮದುವೆ ಯಾವಾಗ ? ಎಂಬ ಪ್ರಶ್ನೆಯಿಟ್ಟಿದ್ದರು. ಆದರೆ ಚಂದನ್ ಶೆಟ್ಟಿ ಈ ಪ್ರಶ್ನೆಗಳಿಗೆ್ಳಲ್ಲಾ ಮೌನವಗಿಸಿ್್ದದ್ದರು.
ಚಂದನ್ ಶೆಟ್ಟಿ ತನ್ನ ಫೇಸ್ ಬುಕ್ ನಲ್ಲಿ ಮೊನ್ನೆ ಯಷ್ಟೇ ನಿವೇದಿತಾ ಗೌಡ ಅವರೊಂದಿಗಿನ ಫೋಟೋ ಅಪ್ ಲೋಡ್ ಮಾಡಿ ” ಕೋಟಿ ಕೋಟ್ಟರು ಸಾಲದು ಅವಳು ತೋರುವ ಸಾಟಿ ಇಲ್ಲದ ಪ್ರೀತಿಗೆ “ ಎಂದು ತಮ್ಮ ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ಹಾಗೇ ನಮ್ಮಿಬ್ಬರ ಕುಟುಂಬದವರು ಒಪ್ಪಿದರೆ ನಾವು ಮದುವೆ ಆಗಲು ತಯಾರಿದ್ದೇವೆ ಎಂದು ಹೇಳಿದ್ದಾರೆ. ಆದರೆ ನಿವೇದಿತಾ ಗೌಡ ಇನ್ನು ವಿದ್ಯಾಭ್ಯಾಸಮಾಡುತ್ತಿದ್ದಾರೆ, ನಾನು ಕೆಲವು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದೇನೆ, ಆದ್ದರಿಂದ ನಾವಿಬ್ಬರು ಮದುವೆಯಾಗುವುದು ತಡವಾಗಬಹುದು ಎಂದಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401