ದಿನದ ಸುದ್ದಿ

ಚಂದನ್ ಶೆಟ್ಟಿ – ನಿವೇದಿತಾ ಗೌಡ ಡೈವೋರ್ಸ್ ನಿರ್ಧಾರ

Published

on

ಸುದ್ದಿದಿನಡೆಸ್ಕ್: ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 5ಗೆ ನಿವೇದಿತಾ ಗೌಡ, ಕನ್ನಡ ರಾಪರ್, ಸಂಗೀತ ನಿರ್ದೇಶಕ, ಗಾಯಕ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಎಂಟ್ರಿ ಕೊಟ್ಟಿದ್ದರು.

ನಂತರ 2020ರಲ್ಲಿ ಫೆಬ್ರವರಿ 26ನೇ ತಾರೀಕಿನಂದು ಚಂದನ್ ಶೆಟ್ಟಿ- ನಿವೇದಿತಾ ಗೌಡ ಮದುವೆ ಆಗಿದ್ರು. ಮದುವೆಗೆ ಪುನೀತ್ ರಾಜ್‌ಕುಮಾರ್ ದಂಪತಿ, ಧ್ರುವ ಸರ್ಜಾ ದಂಪತಿ, ರಘು ಶಾಸ್ತ್ರಿ, ನಟ ಶ್ರೇಯಸ್ ಮಂಜು, ಶೈನ್ ಶೆಟ್ಟಿ, ನಟಿ ಅದ್ವಿತಿ ಶೆಟ್ಟಿ, ನಿರೂಪಕ ಅಕುಲ್ ಬಾಲಾಜಿ, ನಿರಂಜನ್ ದೇಶಪಾಂಡೆ ಮುಂತಾದವರು ಬಂದು ಜೋಡಿಗೆ ಶುಭ ಹಾರೈಸಿದ್ರು. ಈ ಜೋಡಿಯನ್ನು ಎಲ್ಲರೂ ಬಹಳ ಮೆಚ್ಚಿಕೊಂಡಿದ್ರು.

ಇನ್ನು ಇಷ್ಟು ದಿನ ಚೆನ್ನಾಗಿ ಇದ್ದ ಈ ಜೋಡಿ ದಿಢೀರ್​ ಅಂತಾ ಡಿವೋರ್ಸ್​ ಮಾಡಿಕೊಂಡಿದ್ದಾರೆ. ಈ ಜೋಡಿ ಡಿವೋರ್ಸ್​ ಸುದ್ದಿ ಕೇಳಿ ಎಲ್ಲರಿಗೂ ಶಾಕ್​ ಆಗಿದೆ. ಇಬ್ಬರು ಪರಸ್ಪರ ಒಪ್ಪಂದದ ಮೇರೆಗೆ ಡಿವೋರ್ಸ್​ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

ಮದುವೆ ಆಗಿದ್ದ ಬಳಿಕ ಮಾತಾಡಿದ್ದ ಚಂದನ್​ ಶೆಟ್ಟಿ, ಇಂದಿನಿಂದ ನನ್ನ ಜೀವನ ಬೇರೆ ತರ ಇರಲಿದೆ. ಇಷ್ಟು ದಿನ ಒಬ್ಬನೇ ಇರ್ತಿದ್ದೆ. ಇನ್ಮುಂದೆ ಹೆಂಡತಿ ಕೂಡ ಇರುತ್ತಾಳೆ. ತುಂಬಾ ಖುಷಿಯಾಗುತ್ತಿದೆ. ಜೀವನದಲ್ಲಿ ಮದುವೆ ಎಂಬುದು ತುಂಬಾ ಮುಖ್ಯವಾದ ವಿಚಾರ. ಇವತ್ತಿನಿಂದ ಜೀವನವೂ ತುಂಬ ಚೆನ್ನಾಗಿರುತ್ತದೆ. ಜೀವನ ಪೂರ್ತಿ ನೆನಪಿನಲ್ಲಿ ಉಳಿಯುವಂತೆ ಮದುವೆ ಮಾಡಿಕೊಳ್ಳಬೇಕು ಅಂದುಕೊಂಡಿದ್ದೆವು. ಅದೇ ರೀತಿ ಮದುವೆ ಕೂಡ ಅದ್ದೂರಿಯಾಗಿ ಆಗಿದೆ ಎಂದು ಚಂದನ್​​ ಹೇಳಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version