ದಿನದ ಸುದ್ದಿ
ಚಂದ್ರಲೇಖಾ ಅವರಿಗೆ ಪಿ.ಎಚ್‍ಡಿ ಪದವಿ
ಸುದ್ದಿದಿನ,ದಾವಣಗೆರೆ : ದಾವಣಗೆರೆ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಜೆ.ಎಸ್.ಚಂದ್ರಲೇಖಾ ಇವರು ‘ಸೋಷಿಯಲ್ ಮೀಡಿಯಾ, ಪಬ್ಲಿಕ್ ಸ್ಪಿಯರ್ ಅಂಡ್ ದಿ ಯೂತ್: ಎಕ್ಸ್‍ಪ್ಲೋರೇಟರಿ ಸ್ಟಡಿ ಆಫ್ ಬೆಂಗಳೂರು ಅರ್ಬನ್’ ವಿಷಯದ ಕುರಿತು ಸಂಶೋಧನಾ ಪ್ರಬಂಧ ಮಂಡಿಸಿದ್ದರು.
ಈ ಮಹಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯವು ಪಿ.ಎಚ್‍ಡಿ ಪದವಿ ನೀಡಿದೆ. ಇವರಿಗೆ ಬೆಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ. ಎಚ್.ಕೆ.ಮರಿಸ್ವಾಮಿ ಮಾರ್ಗದರ್ಶಕರಾಗಿದ್ದರು ಎಂದು ಪ್ರಕಟಣೆ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243