ದಿನದ ಸುದ್ದಿ

ಚನ್ನಗಿರಿ | ದನ ಮೇಯಿಸುತ್ತಿದ್ದ ವೃದ್ಧನ ಮೇಲೆ ಕರಡಿ ದಾಳಿ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ಚನ್ನಗಿರಿ: ತಾಲ್ಲೂಕಿನ ಬಯಲುದಿಬ್ಬ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ದನ ಮೇಯಿಸುತ್ತಿದ್ದ ವೃದ್ಧರೊಬ್ಬರಿಗೆ ಕರಡಿ ದಾಳಿ ನಡೆಸಿದ್ದು, ಅವರಿಗೆ ತೀವ್ರ ಗಾಯಗಳಾಗಿವೆ ಎಂದು ಮಾವಿನಕಟ್ಟೆ ವಲಯ ಅರಣ್ಯಾಧಿಕಾರಿ ಮಾವಿನಹೊಳೆಯಪ್ಪತಿಳಿಸಿದ್ದಾರೆ.

ಬಯಲುದಿಬ್ಬ ಗ್ರಾಮದ ಮಂಜಪ್ಪ (67) ಎಂಬುವವರು ಗಾಯಗೊಂಡವರು. ಅರಣ್ಯ ಪ್ರದೇಶದಲ್ಲಿ ದಾಳಿ ನಡೆಸಿದ ಕರಡಿ ಮಂಜಪ್ಪ ಅವರ ಕಣ್ಣು, ಮೂಗು, ಮುಖಕ್ಕೆ ಗಾಯ ಮಾಡಿದ್ದು, ಗಂಭೀರವಾಗಿ ಗಾಯಗೊಂಡ ಇವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243,

Trending

Exit mobile version