ದಿನದ ಸುದ್ದಿ
ಚನ್ನಗಿರಿ | ಲಂಚ ಸ್ವೀಕರಿಸಿದ್ದ ಗ್ರಾಮ ಲೆಕ್ಕಾಧಿಕಾರಿಗೆ 2 ವರ್ಷ ಜೈಲು
ಸುದ್ದಿದಿನ,ದಾವಣಗೆರೆ: ಚನ್ನಗಿರಿ ತಾಲ್ಲೂಕಿನ ದೊಡ್ಡಘಟ್ಟ (ನವಿಲೇಹಾಳ್ ವೃತ್ತ)’ ಗ್ರಾಮದಲ್ಲಿ 2011ರಲ್ಲಿ ಲಂಚ ಪಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮ ಲೆಕ್ಕಾಧಿಕಾರಿ ತಿಪ್ಪೇಸ್ವಾಮಿಗೆ ಎರಡು ವರ್ಷ ಸಜೆ ಮತ್ತು 20 ಸಾವಿರ ದಂಡ ಹಾಗೂ ಸಹಚರ ಜಗದೀಶ್‌ಗೆ ಒಂದು ವರ್ಷ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ಜಿಲ್ಲಾ ಮತ್ತು ಸೆಷನ್ಸ್ ಹಾಗೂ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಬಿ. ಗೀತಾ ಆದೇಶ ನೀಡಿದ್ದಾರೆ.
2011ರಲ್ಲಿ ನವಿಲೇಹಾಳ್ ಗ್ರಾಮದ ಗೋವರ್ಧನ ಗಿರಿಶ್ಯಾಮ್ ಅವರಿಗೆ ಕುಟುಂಬ ಜೀವಂತ ಸದಸ್ಯರ ಪತ್ರ ನೀಡಲು 2,000 ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು. 2012 ರಲ್ಲಿ ಪ್ರಕರಣವು ನ್ಯಾಯಾಲಯದಲ್ಲಿ ದಾಖಲಾಗಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243