ದಿನದ ಸುದ್ದಿ
ಚನ್ನಗಿರಿ | ಶ್ರೀ ಶಿವಲಿಂಗೇಶ್ವರ ಸ್ವಾಮಿ ಪ್ರಥಮ ದರ್ಜೆ ಕಾಲೇಜಿನ ಎನ್ ಎಸ್ ಎಸ್ ವತಿಯಿಂದ ಹೊನ್ನೇಬಾಗಿ ಅರಣ್ಯ ವ್ಯಾಪ್ತಿಯಲ್ಲಿ ಬೀಜೋತ್ಸವ ಕಾರ್ಯಕ್ರಮ
ಸುದ್ದಿದಿನ, ಚನ್ನಗಿರಿ : ಅರಣ್ಯ ಇಲಾಖೆ ಚನ್ನಗಿರಿ,ಶ್ರೀ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು 2 ರ ಸಹಯೋಗದೊಂದಿಗೆ ಹೊನ್ನೇಬಾಗಿ ಪ್ರಾದೇಶಿಕ ಅರಣ್ಯ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯ ಮಹತ್ವಾಕಾಂಕ್ಷಿ ಬೀಜೋತ್ಸವ ಕಾರ್ಯಕ್ರಮ ಇಂದು ನಡೆಯಿತು.
ಶ್ರೀ ಶಿವಲಿಂಗೇಶ್ವರ ಸ್ವಾಮಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ 40 ಸ್ವಯಂ ಸೇವಕರು ಭಾಗವಹಿಸಿ ಹೊಂಗೆ, ನೇರಳೆ ವಿವಿಧ ಜಾತಿಯ ಸಾವಿರಾರು ಬೀಜಗಳನ್ನು ಹಾಕುವುದರ ಮೂಲಕ ಬೀಜೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಿದರು.
ಕಾರ್ಯಕ್ರಮದಲ್ಲಿ ಅರಣ್ಯಾಧಿಕಾರಿ ಸತೀಶ್ ಎಸ್. ಆರ್ ಎಫ್ ಓ, ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಹಾಲಸಿದ್ದಪ ಸಿ ಸಿ, ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿಗಳಾದ ಪ್ರೊ.ಷಣ್ಮುಖಪ್ಪ ಕೆ.ಎಚ್ ಹಾಗೂ ಪ್ರೊ.ಗೌರಮ್ಮ ಅರಣ್ಯ ಇಲಾಖೆಯ ಸಿಬ್ಬಂದಿಯವರಾದ ವಸಂತಕುಮಾರ್, ಜಗದೀಶ್,ಉಮೇಶ್, ಬಸವನಗೌಡ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ 40 ಕ್ಕೂ ಹೆಚ್ಚು ಸ್ವಯಂ ಸೇವಕರು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243