ದಿನದ ಸುದ್ದಿ

ಚನ್ನಗಿರಿ ಪಟ್ಟಣದ ಗೌಡ್ರು ಬೀದಿ ಕಂಟೈನ್‍ಮೆಂಟ್ ವಲಯವಾಗಿ ಘೋಷಣೆ

Published

on

ಸುದ್ದಿದಿನ,ದಾವಣಗೆರೆ : ಜಿಲ್ಲೆಯ ಚನ್ನಗಿರಿ ಪಟ್ಟನದಲ್ಲಿ ಕೊರೊನಾ ಪಾಸಿಟಿವ್ ವರದಿಯಾಗಿದ್ದ ರೋಗಿ ಸಂಖ್ಯೆ 8806 ರ ಪ್ರದೇಶವನ್ನು ವಿಪತ್ತು ನಿರ್ವಹಣಾ ಕಾಯ್ದೆ 2005ರ ಅಧಿಕೃತ ಜ್ಞಾಪನೆ ಅನ್ವಯ “ಕಂಟೈನ್‍ಮೆಂಟ್ ವಲಯ”ವೆಂದು ಘೋಷಿಸಿ ಕ್ರಮ ಕೈಗೊಳ್ಳಲಾಗಿದೆ.

ಜೂನ್ 21 ರ ಸಂಜೆಯಿಂದ ಕೋವಿಡ್ ಪಾಸಿಟಿವ್ ಆಗಿದ್ದ ರೋಗಿ ಸಂಖ್ಯೆ 8806 ನೆಲೆಸಿದ್ದ ಮನೆಯ ಪೂರ್ವಕ್ಕೆ ಚಂದ್ರಶೇಖರಪ್ಪನವರ ಮನೆ. ಪಶ್ಚಿಮಕ್ಕೆ ಗಣಪತಿ ದೇವಸ್ಥಾನ ರಸ್ತೆ. ಉತ್ತರಕ್ಕೆ ಸಣ್ಣ ಕುರುಬರ ಬೀದಿ.

ದಕ್ಷಿಣಕ್ಕೆ ಕಲ್ಲುಸಾಗರ ರಸ್ತೆ ಯನ್ನು ಹಾಗೂ ಈ ಬಡಾವಣೆಯ ಎಲ್ಲೆಯಲ್ಲಿರುವ ಪೂರ್ವಕ್ಕೆ ವಿದ್ಯಾಭಾರತಿ ಶಾಲೆ, ಉತ್ತರಕ್ಕೆ ಮರಾಠಟರ ಬೀದಿ, ಉತ್ತರಕ್ಕೆ ನಾಡಿಗರ ಬೀದಿ, ದಕ್ಷಿಣಕ್ಕೆ ಕುರುಬರ ಬೀದಿ.

ಈ ವ್ಯಾಪ್ತಿಯಲ್ಲಿ 62 ಮನೆಗಳು, 211 ಜನಸಂಖ್ಯೆ ಹಾಗೂ 200 ಮೀಟರ್ ಬಫರ್ ಝೋನ್ ಸೇರಿದಂತೆ ಈ ವಲಯವನ್ನು ಕಂಟೈನ್‍ಮೆಂಟ್ ಝೋನ್ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ನಿಯಮಾನುಸಾರ ಆದೇಶಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version