ದಿನದ ಸುದ್ದಿ

ಚನ್ನಗಿರಿ | 2 ಲಕ್ಷ ಮೌಲ್ಯದ ಗಾಂಜಾ ಗಿಡಗಳ ವಶ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ, ದಾವಣಗೆರೆ : ಹೊಸಪೇಟೆ ವಿಭಾಗದ ಜಾರಿ ಮತ್ತು ತನಿಖೆಯ ಜಂಟಿ ಆಯುಕ್ತರು ಇವರ ಮಾರ್ಗದರ್ಶನ ಮತ್ತು ದಾವಣಗೆರೆ ಅಬಕಾರಿ ಉಪ ಆಯುಕ್ತರು ಇವರ ನೇತೃತ್ವದಲ್ಲಿ ಅ.14 ರಂದು ಚನ್ನಗಿರಿ ತಾಲ್ಲೂಕಿನ ಶೃಂಗಾರಬಾಗು ಗ್ರಾಮದ ಅರಣ್ಯ ಇಲಾಖೆಗೆ ಸೇರಿದ ಸರ್ವೆ ನಂ 16 ರ ಜಮೀನಿನಲ್ಲಿ ಮೆಕ್ಕೆಜೋಳದ ಬೆಳೆಯ ಮಧ್ಯದಲ್ಲಿ ಹೂ ಬಿಟ್ಟಿರುವ ಒಟ್ಟು 130 ಹಸಿ ಗಾಂಜಾ ಗಿಡಗಳನ್ನು(36.4 ಕೆ.ಜಿ) ಇಲಾಖೆ ವಶಕ್ಕೆ ಜಪ್ತು ಪಡಿಸಿಕೊಳ್ಳಲಾಯಿತು.

ಈ ಗಾಂಜಾ ಗಿಡಗಳ ಮೌಲ್ಯ ಒಟ್ಟು ರೂ.2,00,000/- ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿನ ಆರೋಪಿ ಹನುಮಂತಪ್ಪ ಬಿನ್ ಚನ್ನಬಸಪ್ಪ, 57 ವರ್ಷ ಶೃಂಗಾಬಾಗು ಗ್ರಾಮ, ಚನ್ನಗಿರಿ ತಾಲ್ಲೂಕು ಇವರು ತಲೆಮರೆಸಿಕೊಂಡಿದ್ದು, ಇವರನ್ನು ಪತ್ತೆ ಹಚ್ಚಿ ಬಂಧಿಸಬೇಕಾಗಿದ್ದು, ಈ ತನಿಖೆ ಮುಂದುವರೆಯಲಿದೆ.

ಈ ಪ್ರಕರಣದ ತನಿಖಾ ಸಮಯದಲ್ಲಿ ಅಬಕಾರಿ ಉಪ ಆಯುಕ್ತರಾದ ಬಿ.ಶಿವಪ್ರಸಾದ್, ಹೊನ್ನಾಳಿ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ವೀರೇಶ್ ಬಿ ಚಿಕ್ಕರೆಡ್ಡಿ, ಚನ್ನಗಿರಿ ಅಬಕಾರಿ ನಿರೀಕ್ಷಕರಾದ ನೌಷಾದ್ ಅಹಮದ್ ಖಾನ್, ಅಬಕಾರಿ ನಿರೀಕ್ಷಕರಾದ ರಮೇಶ್.ಬಿ.ಅಗಡಿ, ಚನ್ನಗಿರಿ ಅಬಕಾರಿ ಉಪ ನಿರೀಕ್ಷಕರು ಮತ್ತು ರಕ್ಷಕರುಗಳಾದ ರಮೇಶ್.ಕೆ.ಹೆಚ್ ಮತ್ತು ಭರತೇಶ್ ಶಿರೋಳ್ ಹಾಗೂ ಇತರೆ ಸಿಬ್ಬಂದಿಗಳು ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version