ದಿನದ ಸುದ್ದಿ

ಚನ್ನಗಿರಿ | ಸೇವಾ ಭದ್ರತೆಗಾಗಿ ಒತ್ತಾಯಿಸಿ ಅತಿಥಿ ಉಪನ್ಯಾಸಕರ ಧರಣಿ

Published

on

ಸುದ್ದಿದಿನ, ದಾವಣಗೆರೆ -ಚನ್ನಗಿರಿ : ಪಟ್ಟಣದ ಶ್ರೀ ಶ್ರೀ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ಸೇವಾ ಭದ್ರತೆಗಾಗಿ ಸೋಮವಾರ ಪ್ರತಿಭಟನೆ ನಡೆಸಿದರು.

ಡಿಸೆಂಬರ್ 10 ನೇ ತಾರೀಖಿನಿಂದ ಆರಂಭವಾಗಿದ್ದು, ಸರ್ಕಾರವು ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ನಮ್ಮ ಪ್ರತಿಭಟನೆಯನ್ನು ಮುಂದುವರೆಸುತ್ತೇವೆ ಎಂದು ಅತಿಥಿ ಉಪನ್ಯಾಸಕರು ತಿಳಿಸಿದರು.

ಸುಮಾರು 88 ಮಂದಿ ಅತಿಥಿ ಉಪನ್ಯಾಸಕರು ಕಾಲೇಜಿನಲ್ಲಿ ಸೇವಾ ಭದ್ರತೆ ಇಲ್ಲದೆ ಕೇವಲ 11 ಸಾವಿರ, 13 ಸಾವಿರ ರೂಗಳಿಗೆ ಕಾರ್ಯನಿರ್ವಹಿಸುತ್ತಿದ್ದು, ಬೆಲೆ ಏರಿಕೆ ಬಿಸಿಯ ಈ ಸಂದರ್ಭದಲ್ಲಿ ಕಾರ್ಯನಿರ್ವಹಿಸುವುದು ತುಂಬಾ ಕಷ್ಟ ವಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರ ಸಂಘ ಚನ್ನಗಿರಿ, ಗೌರವ ಅಧ್ಯಕ್ಷರು, ಶಿವಕುಮಾರ ಎಂ.ಆರ್, ಅಧ್ಯಕ್ಷರು:-ಶಂಕ್ರಾನಾಯ್ಕ ಆರ್, ಉಪಾಧ್ಯಕ್ಷರು:-ಶಿಲ್ಪ ಎಂ.ವಿ
ಕಾರ್ಯದರ್ಶಿಗಳು :- ಶ್ರೀನಿವಾಸ ರಾವ್.ಎಸ್‌. ವಿ,ಸಹಕಾರ್ಯದರ್ಶಿ :-ಮಂಜುಳಾ.ಎಮ್,ಸಂಘಟನಕಾರ್ಯದರ್ಶಿ :- ಸಂತೋಷ. ಬಿ.ಎನ್,ಸಹಸಂಘಟನಕಾರ್ಯದರ್ಶಿ :- ಶ್ವೇತ.ಎಂ.ವಿ,ಖಜಾಂಚಿ:-ಗಿರೀಶ್ ಎಂ, ಸಹಖಜಾಂಚಿ:-ಆಸ್ಮಾ ಹಾಗೂ,ಕಾರ್ಯಕಾರಣಿ ಸಮಿತಿಯ ಸದಸ್ಯರಾದ, ಅವಿನಾಶ್.ಎಚ್.ಎಮ್ ,ಸುರೇಶ್.ಟಿ.ಎಸ್,ನಾಗೇಂದ್ರರಾವ್. ಆರ್., ಗೋವರ್ದನ ಗಿರಿಶಾಮ್ ಎನ್.ಆರ್, ಅನಂತ್ ಕುಮಾರ್ ಎಸ್.ಆರ್ ಮತ್ತು ಇತರೆ ಅತಿಥಿ ಉಪನ್ಯಾಸಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವಿಡಿಯೋ | ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

ಅತಿಥಿ ಉಪನ್ಯಾಕರ ಧರಣಿ ವಿಡಿಯೋ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version