ದಿನದ ಸುದ್ದಿ
ಚನ್ನಗಿರಿ | ಮುಸ್ಲಿಂ ಮಹಿಳೆ ಮೇಲೆ ಹಲ್ಲೆ ; ಆರು ಮಂದಿ ಬಂಧನ
ಸುದ್ದಿದಿನ,ದಾವಣಗೆರೆ: ಚನ್ನಗಿರಿ ತಾಲೂಕಿನ ತಾವರೆಕೆರೆ ಗ್ರಾಮದಲ್ಲಿ ವಿವಾಹೇತರ ಸಂಬಂಧದ ಆರೋಪದ ಮೇಲೆ ಜಾಮಿಯಾ ಮಸೀದಿಯ ಹೊರಗೆ ಮುಸ್ಲಿಂ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಬಂಧಿತರನ್ನು ಮೊಹಮ್ಮದ್ ನಯಾಜ್ (32), ಮೊಹಮ್ಮದ್ ಗೌಸ್ ಪೀರ್ (45), ಚಾಂದ್ ಬಾಷಾ (35), ಇನಾಯತ್ ಉಲ್ಲಾ (51), ದಸ್ತಗೀರ್ (24), ಮತ್ತು ರಸೂಲ್ ಟಿಆರ್ (42) ಎಂದು ಗುರುತಿಸಲಾಗಿದೆ. ಅವರು ತಾವರೆಕೆರೆ ಗ್ರಾಮದಲ್ಲಿ ಸಣ್ಣ ಅಂಗಡಿಗಳನ್ನು ನಡೆಸುತ್ತಿದ್ದರು.
ಈ ಜನರು ಜಮೀಲ್ ಅಹ್ಮದ್ ಅವರ ಪತ್ನಿ ಶಬೀನಾ ಬಾನು ಅವರ ಮೇಲೆ ವಿವಾಹೇತರ ಸಂಬಂಧದ ಆರೋಪದ ಮೇಲೆ ಹಲ್ಲೆ ನಡೆಸಿದರು. ಏಪ್ರಿಲ್ 7 ರಂದು ಶಬೀನಾ ಬಾನು (38) ತನ್ನ ಮಕ್ಕಳು ಮತ್ತು ಸ್ನೇಹಿತೆ ನಸ್ರೀನ್ ಜೊತೆ ಒಂದು ಸಣ್ಣ ಬೆಟ್ಟಕ್ಕೆ ಹೋಗಿ ಅದೇ ದಿನ ಮನೆಗೆ ಮರಳಿದ್ದರು ಎಂದು ಹೇಳಲಾಗುತ್ತದೆ. ವೈದ್ಯರ ನಿರ್ದೇಶನದಂತೆ ಮಾತ್ರೆ ತೆಗೆದುಕೊಂಡು ಮಲಗಿದ್ದರು.
ಈ ಮಧ್ಯೆ, ಆಕೆಯ ಸ್ನೇಹಿತೆ ನಸ್ರೀನ್, ತಾನು ಮನೆಗೆ ಹೋಗುವುದಾಗಿ ಹೇಳಿದ್ದರೂ, ಯಾವುದೋ ಕಾರಣಕ್ಕೆ ಅಲ್ಲಿಯೇ ಉಳಿದಳು. ನಂತರ, ನಸ್ರೀನ್ ಸಂಬಂಧಿ ಫ್ಜಯಾಜ್ ಎಂಬ ವ್ಯಕ್ತಿ ಶಬೀನಾ ಬಾನು ನಿವಾಸಕ್ಕೆ ಬಂದ. ಜಮೀಲ್ ತನ್ನ ಮನೆಗೆ ಬಂದು ನಸ್ರೀನ್ ಮತ್ತು ಫಯಾಜ್ ರನ್ನು ನೋಡಿದಾಗ, ತನ್ನ ಹೆಂಡತಿಗೆ ವಿವಾಹೇತರ ಸಂಬಂಧವಿದೆ ಎಂದು ಅನುಮಾನಿಸಿದನು. ನಂತರ, ಅವರು ಮಸೀದಿಯಲ್ಲಿ ಧಾರ್ಮಿಕ ಮುಖಂಡರಿಗೆ ದೂರು ನೀಡಿದರು. ಶಬೀನಾ ಬಾನು ಮತ್ತು ಅವರ ಸ್ನೇಹಿತೆ ನಸ್ರೀನ್ ಮತ್ತು ಅವರ ಸಂಬಂಧಿ ಫಯಾಜ್ ಅವರನ್ನು ಏಪ್ರಿಲ್ 9 ರಂದು ತಾವರೆಕೆರೆ ಮಸೀದಿಯೊಳಗೆ ಕರೆದೊಯ್ಯಲಾಯಿತು. ಅಂದು ಮಹಿಳೆಯ ಮೇಲೆ ಹಲ್ಲೆ ನಡೆಸಲಾಯಿತು. ಎ.11 ರಂದು ಠಾಣೆಗೆ ಬಂದು ಮಹಿಳೆ ದೂರು ನೀಡಿದ್ದರು. ಈ ಸಂಬಂಧ ವಿಡಿಯೋ ಭಾರೀ ವೈರಲ್ ಆಗಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243