ದಿನದ ಸುದ್ದಿ
ವಿಡಿಯೊ | ಚನ್ನಗಿರಿ : ಶಾಸಕ ಮಾಡಾಳು ವಿರೂಪಾಕ್ಷಪ್ಪರಿಂದ ಕೋಗಲೂರು ಗ್ರಾಮದಲ್ಲಿ ಅಹಾರ ಕಿಟ್ಟುಗಳ ವಿತರಣೆ
ಸುದ್ದಿದಿನ,ಚನ್ನಗಿರಿ : ತಾಲೂಕಿನ ಹಿರೇ ಕೋಗಲೂರು ಗ್ರಾಪಂ ವ್ಯಾಪ್ತಿಯ, ಗಿರಿಯಾಪುರ , ಚಿಕ್ಕ ಕೋಗಲೂರು ಗ್ರಾಮಗಳ ಬಡವವರಿಗೆ 500 ಆಹಾರ ಕಿಟ್ಟುಗಳನ್ನು ಶಾಸಕರಾದ ಮಾಡಾಳು ವಿರೂಪಾಕ್ಷಪ್ಪ ಅವರು ಶುಕ್ರವಾರ ವಿತರಿಸಿದರು.
ಆಹಾರದ ಕಿಟ್ಟುಗಳನ್ನು ವಿತರಿಸಿ ಮಾತನಾಡಿದ ಅವರು, ತಾಲೂಕಿನದ್ಯಾಂತ ಪ್ರತಿ ಗ್ರಾಮಗಳಿಗೆ ಬೇಟಿ ಮಾಡಿ ಗ್ರಾಮದ ಮುಖಂಡರುಗಳು ಆಯ್ಕೆ ಮಾಡಿದಂತಹ ಬಡವರಿಗಾಗಿ ಲಕ್ಷಾಂತರ ಅಹಾರ ಕಿಟ್ಟುಗಳನ್ನು ವಿತರಣೆ ಮಾಡುತಿದ್ದೇವೆ ಎಂದರು.
ಲಾಕ್ಡೌನ್ ನಿಂದಾಗಿ ಕೂಲಿ ಕೆಲಸವಿಲ್ಲದೆ ಮನೆಯಲ್ಲಿರುವಂತಹ ಕಾರ್ಮಿಕರು ಮತ್ತು ಬಡವರಿಗಾಗಿ ಅಹಾರ ಕಿಟ್ಟುಗಳ ಖರೀದಿಗಾಗಿ ಸಾರ್ವಜನಿಕರಿಂದ ದೇಣಿಗೆಯನ್ನು ಸಂಗ್ರಹಿಸಿ ಮತ್ತು ಶಾಸಕರ ಅನುಧಾನವನ್ನು ಬಳಸಿಕೊಂಡು ಕಿಟ್ಟುಗಳನ್ನು ವಿತರಿಸಿದ್ದೇವೆ ಎಂದು ಹೇಳಿದರು.
ಆದ್ದರಿಂದ ನೀವುಗಳು ಮನೆಯಲ್ಲಿಯೇ ಇರಬೇಕು ಸರ್ಕಾರದ ನಿಯಮಗಳನ್ನಾ ತಪ್ಪದೆ ಪಾಲಿಸಬೇಕು ಸರ್ಕಾರ ನಿಮ್ಮೊಂದಿಗೆ ಇದೆ ಅತ್ಮಸ್ಥೈರ್ಯ ಕಳೆದು ಕೊಳ್ಳಬಾರದು ಮಹಾಮಾರಿ ಕೊರೋನ ರೋಗವನ್ನು ದೇಶದಿಂದ ಓಡಿಸಬೇಕೆಂದರೆ ತಾವುಗಳು ಮನೆಯಲ್ಲಿಯೇ ಇರಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಗಿರೀಶ್ , ತಾಪಂ ಕಾರ್ಯನಿರ್ವಾಹಣಾಧಿಕಾರಿಯಾದ ಪ್ರಕಾಶ್ , ವೃತ್ತ ನಿರೀಕ್ಷಕರಾದ ಆರ್ ಆರ್ ಪಾಟೀಲ್ , ಸಂತೇಬೆನ್ನೂರು ಪಿಎಸ್ಐ ಶಿವರುದ್ರಪ್ಪ ಎಸ್ ಮೇಟಿ , ಹೆಚ್ ಯು ಮಲ್ಲಿಕಾರ್ಜುನ , ಜಗದೀಶ್ ಗೌಡ , ಶರಣಪ್ಪ ಎಸ್ ಬಿ ಗ್ರಾಪಂ ಅಧ್ಯಕ್ಷರಾದ ಅನುಭಾಗ್ಯಮ್ಮ , ಉಪಾಧ್ಯಕ್ಷರಾದ ಶಂಕರಮ್ಮ , ಚಿದಾನಂದಯ್ಯ , ಸುನಿಲ್ , ರಾಜಶೇಖರಪ್ಪ ಉಪಸ್ಥಿತರಿದ್ದರು.
ವಿಡಿಯೋ ನೋಡಲು ಲಿಂಕ್ ಮೇಲೆ ಕ್ಲಿಕ್ ಮಾಡಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243