ದಿನದ ಸುದ್ದಿ

ಚನ್ನಗಿರಿ | ದೌರ್ಜನ್ಯ ಪ್ರಕರಣದಲ್ಲಿ ವ್ಯಕ್ತಿ ಸಾವು , ಜಿಲ್ಲಾಧಿಕಾರಿಗಳಿಂದ ಮೃತ ವ್ಯಕ್ತಿ ಮನೆಗೆ ಭೇಟಿ; ಸಾಂತ್ವನ

Published

on

ಸುದ್ದಿದಿನ,ದಾವಣಗೆರೆ : ಜಿಲ್ಲೆಯ ಚನ್ನಗಿರಿ ತಾಲ್ಲೂಕು ಕೊಮಾರನಹಳ್ಳಿ ಗ್ರಾಮದ ಮಹಾಬಲಿ ಎಂಬ ವ್ಯಕ್ತಿಯು ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಹೊಂದಿದ್ದು, ಇವರ ಮನೆಗೆ ಇಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರು ಭೇಟಿ ನೀಡಿ ನೊಂದ ಪತ್ನಿ ಹಾಗೂ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ, ಮೊದಲ ಪರಿಹಾರದ ಮೊತ್ತ ರೂ.4,12,500/- ಗಳ ಚೆಕ್‍ನ್ನು ಮೃತರ ಪೋಸ್ಟ್ ಮಾರ್ಟಂ ವರದಿ ಬಂದ ತಕ್ಷಣ ನೀಡಲಾಗುವುದು ಎಂದರು. ಈ ವೇಳೆ ಎಸಿ ಮಮತಾ ಹೊಸಗೌಡರ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶಿವಾನಂದ ಕುಂಬಾರ್ ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version