ದಿನದ ಸುದ್ದಿ

ಚನ್ನಗಿರಿ | ಬಕ್ರೀದ್ ಹಬ್ಬದ ಹಿನ್ನೆಲೆ : ನಾಗರಿಕ ಸೌಹಾರ್ಧ ಸಭೆ ; ಶಾಂತಿಯುತವಾಗಿ ಹಬ್ಬ ಆಚರಿಸಿ : ಎಸ್ಪಿ ಉಮಾ ಪ್ರಶಾಂತ್

Published

on

ಸುದ್ದಿದಿನಡೆಸ್ಕ್: ದಾವಣಗೆರೆ ಜಿಲ್ಲೆ ಶಾಂತಿಯುತ ಜಿಲ್ಲೆಯಾಗಿದ್ದು, ಬಕ್ರೀದ್ ಹಬ್ಬವನ್ನು ಎಲ್ಲರೂ ಸೌಹಾರ್ದಯುತವಾಗಿ, ಶಾಂತಿಯುತವಾಗಿ ಆಚರಿಸುವಂತೆ ಪೋಲಿಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ತಿಳಿಸಿದರು.

ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಚನ್ನಗಿರಿ ಪಟ್ಟಣದ ತಾಲ್ಲೂಕು ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ, ಜಿಲ್ಲಾ ಪೊಲೀಸ್ ವತಿಯಿಂದ, ಬಕ್ರೀದ್ ಹಬ್ಬದ ಅಂಗವಾಗಿ ಚನ್ನಗಿರಿ ಉಪವಿಭಾಗದ ನಾಗರೀಕ ಶಾಂತಿ ಸಭೆಯನ್ನು ಇಂದು ನಡೆಸಲಾಯಿತು.

ಈ ಸಭೆಯಲ್ಲಿ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರು ಹಾಗೂ ಉಪವಿಭಾಗಾಧಿಕಾರಿ ಶ್ರೀ ಅಭಿಷೇಕ್, ತಹಶೀಲ್ದಾರ್ ಶ್ರೀ ಯರಿ ಸ್ವಾಮಿ, ಇಒ ಶ್ರೀ ಉತ್ತಮ್, ಡಾ.ಅಶೋಕುಮಾರ್ ಪಶು ವೈದ್ಯಾಧಿಕಾರಿಗಳು, ಡಿಎಸ್‌ಪಿ ಚನ್ನಗಿರಿ ಉಪವಿಭಾಗ, ಪೊಲೀಸ್ ನಿರೀಕ್ಷಕರು ಚನ್ನಗಿರಿ, ನ್ಯಾಮತಿ, ಹೊನ್ನಾಳಿ ಮತ್ತು ಡಿಎಸ್‌ಬಿ ಶಾಖೆ ರವರು ಉಪಸ್ಥಿತರಿದ್ದರು.

ನಾಗರೀಕರಾದ ಹೊನ್ನಾಳಿ ಎಂ.ಆ‌ರ್ ಮಹೇಶ್, ಅಮಾನುಲ್ಲಾ ಚನ್ನಗಿರಿ ಕಾಂಗ್ರೆಸ್ ಮುಖಂಡರು, ಶ್ರೀನಿವಾಸ ಮೂರ್ತಿ ರೈತ ಮುಂಡರು, ಸರ್ಧಾ‌ರ್ ಅಹ್ಮದ್ ಚನ್ನಗಿರಿ, ದೇವೆಂದ್ರಪ್ಪ ಸಂತೇಬೆನ್ನೂರು, ಮಹಬೂಬ್ ಪೀರ್ ಚನ್ನಗಿರಿ, ಮಹ್ಮದ್ ಸೈಫುಲ್ಲಾ, ಜಬ್ಬಾರ್ ಆಲಿಖಾನ್ ಸಾಸ್ಟೇಹಳ್ಳಿ, ಮಂಜುನಾಥ ವಿಶ್ವಹಿಂದೂ ಪರಿಷತ್ ಚನ್ನಗಿರಿ, ಯೂನಿಷ್ ಭಾಷ ಹಾಗೂ ನಾಗಪ್ಪ ಹೊನ್ನಾಳಿ. ಡಿ ಬಸವರಾಜ್ ಮಾಜಿ ನಿಗಮಮಂಡಳಿ ಅಧ್ಯಕ್ಷರು, ಫಾಜಿಲ್, ಲಾಲುಸಾಬ್ ನಲ್ಲೂರು ಸೇರಿದಂತೆ ಸುಮಾರು 80- 100 ಜನ ಭಾಗವಹಿಸಿದ್ದರು.

ಸಭೆಯಲ್ಲಿ ನಾಗರೀಕರ ಅನಿಸಿಕೆಗಳನ್ನು ಆಲಿಸಿದ್ದು, ಈ ಸಂದರ್ಭದಲ್ಲಿ ಬಕ್ರೀದ್ ಹಬ್ಬವನ್ನು ನಾವುಗಳು ಎಲ್ಲರೂ ಶಾಂತರೀತಿಯಿಂದ ಆಚರಿಸುವುದಾಗಿ ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version