ದಿನದ ಸುದ್ದಿ
ಚನ್ನಗಿರಿ | ಅಂತಾರಾಷ್ಟ್ರೀಯ ಥ್ರೋಬಾಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಶಿವಲಿಂಗೇಶ್ವರ ಕಾಲೇಜಿನ ಹಳೆಯ ವಿದ್ಯಾರ್ಥಿಗಳಿಗೆ ಸನ್ಮಾನ
ಸುದ್ದಿದಿನ,ದಾವಣಗೆರೆ : ಶ್ರೀ ಶಿವಲಿಂಗೇಶ್ವರ ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ರೂಪ ಮತ್ತು ಸುಜಾತ ಅವರು ನೇಪಾಳ ಥ್ರೋಬಾಲ್ ಚಾಂಪಿಯನ್ ಷಿಪ್ ನಲ್ಲಿ ಭಾರತ ತಂಡ ವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನದಲ್ಲಿ ಗೆಲುವು ಸಾಧಿಸಿ ಚಿನ್ನದ ಪದಕ ಗೆದ್ದ ಹಿನ್ನೆಲೆಯಲ್ಲಿ ಅವರನ್ನು ಇಂದು ಕಾಲೇಜಿನಲ್ಲಿ ಸನ್ಮಾನಿಸಲಾಯಿತು.
ಜಿಲ್ಲೆಯ ಚನ್ನಗಿರಿ ತಾಲೂಕಿನ ಹೊದಿಗೆರೆ ಗ್ರಾಮದ ರೂಪ ಮತ್ತು ಕಗತೂರು ಗ್ರಾಮದ ಸುಜಾತ ಮೇ 21 ರಿಂದ 25 ರ ವರೆಗೆ ನೇಪಾಳದ ಪೋಖರ ದಲ್ಲಿ ನಡೆದ ಇಂಡೋ- ನೇಪಾಳ ಥ್ರೋಬಾಲ್ ಚಾಂಪಿಯನ್ ಷಿಪ್ ನಲ್ಲಿ ಭಾಗವಹಿಸಿದ್ದರು.
ರೂಪಾ ಶ್ರೀ ಶಿವಲಿಂಗೇಶ್ವರ ಕಾಲೇಜಿನಲ್ಲಿ ಬಿಬಿಎಂ ಪದವಿ ಪಡೆದಿದ್ದಾರೆ. ಹಾಗೆ ಸುಜಾತ ಅರ್ಥಶಾಸ್ತ್ರದಲ್ಲಿ ಎಂಎ.ಮುಗಿಸಿದ್ದಾರೆ.ಇವರಿಬ್ಬರೂ ಅಪ್ಪಟ ಗ್ರಾಮೀಣ ಪ್ರತಿಭೆಗಳಾಗಿದ್ದು, ಮೊದಲಿನಿಂದಲೂ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ .ಇವರನ್ನು ಪ್ರಾಂಶುಪಾಲರಾದ ಹಾಲಸಿದ್ದಪ್ಪ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ದೈ.ನಿ.ಕಲ್ಲೇಶಪ್ಪ, ಗ್ರಂಥ ಪಾಲಕರಾದ ಮಲ್ಲಿಕಾರ್ಜುನ್, ಐ ಕ್ಯೂ ಎ ಸಿ ಸಂಚಾಲಕರಾದ ಅಬ್ದುಲ್ ರೆಹಮಾನ್, ಗೌರಮ್ಮ,ಸುನೀತ, ಶಿವಕುಮಾರ್,
ಉಮೇಶ್ ಗಾಯಿತ್ರಮ್ಮ.ಅಬಿದಾ ಸಲ್ಮಾ ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243